ಬೆಳಗಾವಿ-೦೪ : ಹಿಂಡಲಗಾ ಲಕ್ಷ್ಮೀ ನಗರದ ಡಿಫೆನ್ಸ್ ಕಾಲೋನಿಯಲ್ಲಿ ಸುಮಾರು 50 ಲಕ್ಷ ರೂ,ಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗೆ ಸ್ಥಳೀಯ ಜನ ಪ್ರತಿನಿಧಿಗಳೊಂದಿಗೆ ಸೇರಿ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಿನಾಕ್ಷಿ ಹಿತ್ತಲಮನಿ, ಪ್ರವೀಣ ಪಾಟೀಲ, ಗಜಾನಂದ ಬಾಂದೇಕರ್, ಪ್ರೇರಣಾ ಮಿರಜಕರ್, ರೇಣುಕಾ ಭಾತ್ಕಂಡೆ, ಅಲ್ಕಾ ಕಿತ್ತೂರ್, ಸೀಮಾ ದೇವಕರ್, ಎಮ್.ವೈ.ತಳವಾರ, ದಿಲೀಪ್ ರಾಣಿ, ವಿಶ್ವನಾಥ್ ಪಾಟೀಲ, ವಿಜಯ್ ಪಾಟೀಲ, ಹರಿಶ್ಚಂದ್ರ ಪಾಟೀಲ, ಗಜಾನಂದ ಸುತಾರ್ ಮುಂತಾದವರು ಉಪಸ್ಥಿತರಿದ್ದರು.
ಚರಂಡಿ ಕಾಮಗಾರಿ:
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಡಾಲ ಅಂಕಲಗಿ ಗ್ರಾಮದಲ್ಲಿ ಸುಮಾರು 35 ಲಕ್ಷ ರೂ,ಗಳ ವೆಚ್ಚದಲ್ಲಿ ಗುಣಮಟ್ಟದ ಚರಂಡಿ ನಿರ್ಮಾಣದ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಹಾಗೂ ಗ್ರಾಮಸ್ಥರು ಸೇರಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವೇದಮೂರ್ತಿ ಶ್ರೀ ರಾಚಯ್ಯ ಅಜ್ಜನವರು, ಗ್ರಾಮಸ್ಥರು ಹಾಜರಿದ್ದರು.
