14/12/2025
IMG-20250112-WA0002

ಬೆಳಗಾವಿ-೧೨: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ ಗ್ರಾಮದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯ ಪ್ರತಿಷ್ಟಾಪನೆ ಹಿನ್ನೆಲೆಯಲ್ಲಿ ಮೂರ್ತಿ ಅಳವಡಿಸುವ ಅಡಿಪಾಯದ ಕಾಂಕ್ರೀಟ್ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿ ಭಾನುವಾರ ಪೂಜೆ ನೆರವೇರಿಸಿ, ಚಾಲನೆ‌ ನೀಡಿದರು.

ಈ ಸಮಯದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಫಕೀರವ್ವ ಅಮರಾಪೂರ್, ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಬಸನಗೌಡ ಹುಂಕ್ರಿಪಾಟೀಲ, ದತ್ತಾ ಬಂಡಿಗಣಿ, ನಾನಪ್ಪ ಪಾರ್ವತಿ, ಚಂಬು ಯಮೋಜಿ, ಮುರಗೇಶ್ ಹಂಪಿಹೊಳಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ ಸುಗಣೆನ್ನವರ, ಫಕೀರ್ ಕೋಲಕಾರ್ ಮುಂತಾದವರು ಹಾಜರಿದ್ದರು.

error: Content is protected !!