ಮಂಗಳೂರು-೦೨:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಮಂಗಳೂರು ತಾಲೂಕು ವ್ಯಾಪ್ತಿಯ…… *ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮಡಿದಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಮಂಗಳೂರು ನಗರದ ಗರೋಡಿ ಸರ್ವ ಮಂಗಳ ಭವನದಲ್ಲಿ ಹಮ್ಮಿಕೊಳ್ಳಲಾಯಿತು..
ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಜೆಪ್ಪು ಗುಡ್ಡೆಗುತ್ತು ಸೂರ್ಯ ನಾರಾಯಣ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರು ಶ್ರೀ ಗಣೇಶ್ ಗಟ್ಟಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ದ.ಕ ಜಿಲ್ಲೆಯ ಗೌರನ್ವಿತ ಜಿಲ್ಲಾ ನಿರ್ದೇಶಕರು ಶ್ರೀ ಮಹಾಬಲ್ ಕುಲಾಲ್ ಸರ್…. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪರಿಕಲ್ಪನೆ ಹಾಗೂ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಹುಟ್ಟು ಅದರ ಬೆಳವಣಿಗೆ ನಡೆದು ಬಂದ ಹಾದಿ….. ಮಹಿಳೆಯರು ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕನ್ನು ರೂಪಿಸಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ,ಶೈಕ್ಷಣಿಕವಾಗಿ, ಸಂಸ್ಕೃತಿಕವಾಗಿ, ಸಂಸಾರದ ಎತ್ತಿನ ಬಂಡಿಯನ್ನು ಜೊತೆಯಾಗಿ ಬಾರ,ಹತ್ತು ಹಲವರು ನಿಭಾಯಿಸುವ ಶಕ್ತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರ ಒಂದು ಬಾಳಿನಲ್ಲಿ ಹೊಸ ಚೈತನ್ಯವನ್ನು ತುಂಬಿ ಬ್ಯಾಂಕಿನ ಮೂಲಕ ಆರ್ಥಿಕ ಸಹಾಯವನ್ನು ಮಾಡಿ ಮಹಿಳೆಯರ ಬದುಕಿಗೆ ಬೆಳಕಾಗಿ ಧರ್ಮಸ್ಥಳ ಯೋಜನೆ ಕಾರ್ಯಕ್ರಮ ಅನುಷ್ಠಾನ ಮಾಡುತ್ತಿದೆ ಎಂಬ ಮಾತುಗಳನ್ನು ಹೇಳಿದರು.
ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷರು ಶ್ರೀಮತಿ ಸರಳ ಕುಲಾಲ್, ಕೇಂದ್ರ ಒಕ್ಕೂಟ ಬ್ರಾಮರಿ ಜ್ಞಾನ ವಿಕಾಸ ಕೇಂದ್ರ ಸದಸ್ಯರು ಶ್ರೀಮತಿ ಗೀತಾ ಪ್ರವೀಣ್ ಉಪಸ್ಥಿತರಿದ್ದರು.ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಹಿಳೆಯರು ಆರ್ಥಿಕ ವಾಗಿ ಸ್ವಾವಲಾಂಬಿಗಳು ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಚಾರ ಗೋಷ್ಠಿಯನ್ನು ಶ್ರೀಮತಿ ಪಲ್ಲವಿ ರಾಜೇಶ್, ಉಪನ್ಯಾಸ ಕರು ಮಹಿಳೆಯರು ಎದುರಿಸುವ ಸವಾಲುಗಳು, ಬಗ್ಗೆ ಉತ್ತಮ ರೀತಿಯಲ್ಲಿ ಮಾಹಿತಿ ನೀಡಿದರು.
ಶ್ರೀಮತಿ ಡಾ, ಭಾಗ್ಯಶ್ರೀ ಶರಣಪ್ರಕಾಶ್, ಪಾಟೀಲ್, ಹಾಗೂ ಸಂಪನ್ಮೂಲ ವ್ಯಕ್ತಿ , ಕಣಚೂರು ಆಯುರ್ವೇದ ವೈದ್ಯಕೀಯ ನಿರ್ದೇಶಕ ಡಾ ಸುರೇಶ ನೆಗಳಗುಳಿಯವರು ಕಾಲಮಾನಾನುಸಾರ ಉಪಯೋಗಿಸ ಬೇಕಾದ ಆಹಾರ ಸೇವನೆ ಬಗ್ಗೆ ಮಾಹಿತಿ ನೀಡಿದರು
ಅವರು ಪಥ್ಯವಾಗುವ ಆಹಾರ ಸೇವನೆಯಿಂದ ರೋಗ ಬಾರದು ಹಾಗೂ ಪಥ್ಯವೇ ಮಾಡದಿದ್ದರೆ ಔಷಧಿಯೂ ನಿರರ್ಥಕ. ಆದ ಕಾರಣ ಆಯಾಯ ಕಾಲದಲ್ಲಿ ಉಂಟಾಗುವ ಹವಾಮಾನ ವೈಪರೀತ್ಯ ತಡೆಗಟ್ಟುವ ಆಹಾರ ಸೇವನೆ ಅಗತ್ಯ ಎಂದರು
ಕಾರ್ಯಕ್ರಮದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ, ಆರತಿ ತಟ್ಟೆ ರಂಗೋಲಿ, ಪುಷ್ಪಗುಚ್ಛ ಸ್ಪರ್ಧೆ ನಡೆಯಿತು ಬಹುಮಾನ ವನ್ನು ನೀಡಲಾಯಿತು..
ವಲಯ ಮೇಲ್ವಿಚಾರಕರು ಶ್ರೀಮತಿ ಶೋಭಾ ಐ, ಸಮನ್ವಯಧಿಕಾರಿ ಆಶಾ ಚಂದ್ರ ,ತಾಲೂಕಿನ ಎಲ್ಲಾ ಜ್ಞಾನ ವಿಕಾಸ ಸೇವಾಪ್ರತಿನಿದಿಗಳು ಮತ್ತು ಆರುನೂರು ಮಿಕ್ಕಿದ ಸದಸ್ಯರು ಭಾಗವಹಿಸಿದ್ದರು.