ಬೆಂಗಳೂರು-೧೯: ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರ ಆದೇಶದ ಮೇರೆಗೆ ಕರ್ನಾಟಕ ವಿಧಾನಸಭೆಯ ವಿಶೇಷ ಸಮಾವೇಶವು ಡಿಸೆಂಬರ್ 9, 2024 ರಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧೀವೇಶನ ನಡೆಯಲಿದೆ. ಈ ಬಗ್ಗೆ ಸಚಿವಾಲಯದ ಪ್ರಕಟಣೆ ಹೊರಡಿಸಲಾಗಿದೆ.
ರಾಜ್ಯಪಾಲರು ಭಾರತದ ಸಂವಿಧಾನದ 174ನೇ ಅನುಚ್ಛೇದದ (1)ನೇ ಖಂಡದ ಪ್ರಕಾರ ಅವರಿಗೆ ಬಿಟ್ಟಿರುವ ಅಧಿಕಾರವನ್ನು ಬಳಸಿಕೊಂಡು, ಈ ಮಹತ್ವದ ಸಭೆಯನ್ನು ಕರೆಸಲು ಆದೇಶಿಸಿದ್ದಾರೆ. ಈ ಸಮಾವೇಶವು ಡಿಸೆಂಬರ್ 9, ಸೋಮವಾರ, ಪೂರ್ವಾಹ್ನ 11:00 ಗಂಟೆಗೆ ಪ್ರಾರಂಭಗೊಳ್ಳಲಿದೆ.
ಈ ಸಭೆಯು ರಾಜ್ಯದ ಪ್ರಮುಖ ನಿಯಮಾವಳಿಗಳ ತೀರ್ಮಾನ ಮತ್ತು ಚರ್ಚೆಗೆ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ಸರ್ಕಾರದ ಮುಖ್ಯಸ್ಥರು, ಶಾಸಕರು ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ರಾಜ್ಯದ ಪ್ರಮುಖ ವಿಚಾರಗಳು ಚರ್ಚೆಗೆ ಬರುತ್ತವೆ ಎಂದು ನಿರೀಕ್ಷಿಸಲಾಗಿದೆ.
ಸುವರ್ಣ ವಿಧಾನಸೌಧದಲ್ಲಿ ನಡೆಯುವ ಈ ಸಮಾವೇಶವು ರಾಜ್ಯದ ಆಡಳಿತಾತ್ಮಕ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಮಹತ್ವದ ಬದಲಾವಣೆಗಳನ್ನು ತರುತ್ತದೆ ಎಂಬ ನಿರೀಕ್ಷೆಯಿದೆ.