ಬೆಳಗಾವಿ-೧೮: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಇವರ ವತಿಯಿಂದ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಮಾರೋಪ ಸಮಾರಂಭವನ್ನು ಬುಧವಾರ ನ. 20 ರಂದು ಕೆ.ಎಲ್.ಇ. ಸಂಸ್ಥೆಯ ಜೆ.ಎನ್.ಎಂ.ಸಿ. ಆವರಣ, ಡಾ. ಬಿ.ಎಸ್. ಜಿರಗಿ ಸಭಾಂಗಣ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ. ನಂಜನಗೌಡ ಹೇಳಿದರು.
ಅವರು ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸೌಹಾರ್ದ ಸಹಕಾರಿಗಳು ಆದಾಯ ತೆರಿಗೆ ವಿಷಯದಲ್ಲಿ ಆತಂಕಪಡುವ ಅಗತ್ಯವಿಲ್ಲ. ಬೆಳಗಾವಿ ಜಿಲ್ಲೆ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಿದೆ. ಈ ಹೆಸರನ್ನು ಉಳಿಸಿಕೊಳ್ಳುವ ಜವಾಬ್ದಾರಿ ಬೆಳಗಾವಿಯ ಎಲ್ಲ ಸಹಕಾರಿಗಳ ಮೇಲಿದೆ. ಸಾಲ, ವ್ಯಾಲ್ಯುಯೇಶನ್ , ಹಣಕಾಸಿನ ನಿರ್ವಹಣೆ ಸೇರಿದಂತೆ ಎಲ್ಲ ಕಾರ್ಯಗಳನ್ನು ಗುಣ ಮಟ್ಟದಲ್ಲಿ ನಡೆದಾಗ ಸಹಕಾರಿ ಪ್ರಗತಿಗೆ ಅನುಕೂಲವಾಗಲಿದೆ. ಸಾಲ ಮರು ಪಾವತಿ ಮಾಡುವಲ್ಲಿ ಗ್ರಾಹಕರು ವಿಳಂಬ ನೀತಿ ಬಗ್ಗೆ, ಅವರಿಗೆ ಕೈ ಎಟ್ಟಕುವ ರೀತಿ ಸಾಲವನ್ನು ನೀಡಬೇಕಿದೆ. ಜೀವನೋಪಾಯೊಂದಿಗೆ ಖಾತೆ ಮಹಿಳೆಯರು ಹಣ ಜಮಾ ಮಾಡುತ್ತಿದ್ದಾರೆ. ಅವರಿಗೆ ಸಕಾಲಕ್ಕೆ ಹಾಗೂ ಸ್ವ-ಸಹಾಯ ಉದ್ಯೋಗಕ್ಕೆ ಸಹಕಾರ ಸಂಸ್ಥೆ ಶ್ರಮಿಸಿದೆ ಎಂದು ಹೇಳಿದರು.
1904 ರಲ್ಲಿ ಆರಂಭವಾದ ಸಹಕಾರ ಚಳುವಳಿಯು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ದೊರಕಿಸಿಕೊಡಬೇಕೆಂಬ ಮಹತ್ತರ ಆಶಯವನ್ನು ಇರಿಸಿಕೊಂಡು ಹಲವಾರು ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಿದೆ. 120 ವರ್ಷಗಳ ಭವ್ಯ ಇತಿಹಾಸವುಳ್ಳ ಭಾರತದ ಸಹಕಾರ ಚಳುವಳಿ ವ್ಯಾಪ್ತಿಯಲ್ಲಿ, ಗಾತ್ರದಲ್ಲಿ, ವಿಶ್ವಮಾನ್ಯತೆಯನ್ನು ಪಡೆದಿದೆ. ಭಾರತ ದೇಶದ ಆರ್ಥಿಕತೆಯ ಸುಭದ್ರತೆಗೆ ತನ್ನದೇ ಆದ ಛಾಪನ್ನು ಹೊಂದಿರುತ್ತದೆ. ಬಡತನ ನಿವಾರಣೆ, ಉದ್ಯೋಗ ಸೃಷ್ಟಿ, ಸಾಮಾಜಿಕ ನ್ಯಾಯದಂತಹ ಕಾರ್ಯಕ್ರಮಗಳು ಚಳುವಳಿಯ ಪ್ರಜಾ ಪ್ರಭುತ್ವದ ತಳಹದಿಯ ಮೂಲಕ ಯಶಸ್ವಿಯಾಗಿ ಕಾರ್ಯಗತವಾಗುತ್ತಿವೆ. ಕೃಷಿ ಕ್ರಾಂತಿ, ಕ್ಷೀರಕ್ರಾಂತಿ, ರಸಗೊಬ್ಬರ ಕ್ಷೇತ್ರದಲ್ಲಿ ಸಹಕಾರ ಚಳುವಳಿ ದೊಡ್ಡ ಕೊಡುಗೆಯನ್ನೇ ನೀಡಿದೆ ಎಂದರು.
ಸಚಿವ ಕೆ.ಎನ್. ರಾಜಣ್ಣ, ಉದ್ಘಾಟಿಸಲಿದ್ದಾರೆ. ಸಚಿವ ಸತೀಶ ಜಾರಕಿಹೊಳಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಶಾಸಕ ಲಕ್ಷ್ಮಣ ಸಂ. ಸವದಿ ಸಹಕಾರಿಗಳನ್ನು ಸನ್ಮಾನಿಸಲಿದ್ದಾರೆ. ಜಿ.ಟಿ ದೇವಗೌಡ, ಶಾಸಕ ರಾಜು ಸೇಠ, ಅಶೋಕ ಪಟ್ಟಣ, ಮಹಾಂತೇಶ ಕಾಗೆ, ಸಂಸದೆ ಪ್ರಿಯಂಕಾ ಜಾರಕಿಹೊಳಿ, ಸಂಸದ ಜಗದೀಶ ಶೆಟ್ಟರ್, ಶಾಸಕ ಬಾಲಚಂದ್ರ , ಜಾರಕಿಹೊಳಿ, ಕೆಎಲ್‌ಇ ಕಾರ್ಯಧ್ಯಕ್ಷರು ಪ್ರಭಾಕರ ಕೋರೆ, , ಜಗದೀಶ ಕವಟಗಿಮಠ ಆಗಮಿಸಲಿದ್ದಾರೆ. ಅಪ್ಪಸಾಹೇಬ ಮಾರುತಿ ಕುಲಗುಡೆ, ಬಿ.ಡಿ. ಪಾಟೀಲ, ಕಲ್ಲಪ್ಪ ಓಬಣ್ಣಗೋಳ್, ಡಾ. ಸುರೇಶ ಗೌಡ, ರವೀಂದ್ರ ಪ. ಪಾಟೀಲ, ಶಾಸಕ ಆಸಿಫ್ (ರಾಜು) ಸೇಠ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ಸಂಯುಕ್ತ ಸಹಕಾರಿಯ ನಿರ್ದೇಕರಾದ ಜಗದೀಶ ಕವಟಗಿಮಠ, ಅಪ್ಪಸಾಹೇಬ ಕುಲಗುಡೆ, ಬಿಡಿ ಪಾಟೀಲ , ಕಲ್ಲಪ್ಪ ಓಬಣ್ಣಗೊಳ್, ಡಾ.ಸುರೇಂದ್ರ ಗೌಡ, ರವೀಂದ್ರ ಪಾಟೀಲ, , ಬಸವನಗೌಡ ಹೊಂಗಲ, ಶರಣಗೌಡ ಪಾಟೀಲ, ಸುರೇಶ ಅಳಗುಂಡಿ, ಡಾ. ಶ್ರೀಕಾಂತ, ಶಿವಕುಮಾರ ಬಿರಾದಾರ, ಲಕ್ಷ್ಮೀಕಾಂತ ಕಟ್ಟಿಮನಿ, ಹಾಲಪ್ಪ ಜಗ್ಗಿನವರ ಹಾಗೂ ಇನ್ನಿತರರು ಹಾಜರಿದ್ದರು.