ಚಿಕ್ಕೋಡಿ-೧೪:ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಚಿಕ್ಕೋಡಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಚಿಕ್ಕೋಡಿಯಲ್ಲಿ ಆಯೋಜನೆ ಮಾಡಲಾಯಿತು. ವಿವಿಧ ಸ್ಪರ್ಧೆಗಳನ್ನು ಸಂಘಟಿಸಲಾಯಿತು. ಅದರಲ್ಲಿ ಆಶುಭಾಷಣ ಸ್ಪರ್ಧೆಯಲ್ಲಿ ಕುಮಾರಿ ಶ್ರಾವಣಿ ರಾಮಚಂದ್ರ. ಅಜ್ಜನಕಟ್ಟಿ ಇವಳು ಶ್ರೀಮತಿ ಡಿ. ಕೆ. ಷಹಾ ಕನ್ನಡ ಹಾಗೂ ಮರಾಠಿ ಪ್ರಾಥಮಿಕ ಶಾಲೆ ಚಿಕ್ಕೋಡಿ ವಿದ್ಯಾರ್ಥಿನಿ ಅಗಿದ್ದು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು. ಚಿಕ್ಕೋಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಇವಳ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಯರು ಶಾಲೆಯ ಮತ್ತು ಸಿ ಟಿ ಇ ಸಂಸ್ಥೆಯ ಆಡಳಿತ ಮಂಡಳಿಯ ಸರ್ವ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.ಎಂದು ಪ್ರಕಟಣೆಯಲ್ಲಿ ತಿಳಿಸಿದರು.