ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ದ ಕುಲಪತಿಗಳಾದ ಪ್ರೊಫೆಸರ್ ಸಿ ಎಂ ತ್ಯಾಗರಾಜ ಇವರ ಸಮ್ಮುಖದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲ ಸಚಿವರಾದ ಶ್ರೀ ಸಂತೋಷ್ ಕಾಮಗೌಡ ಮತ್ತು ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಸಾಯಿದಾ ಬಾನು ಆಫ್ರಿನ್ ಬಳ್ಳಾರಿ, ಇವರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ಅನುಕೂಲ ಕಲ್ಪಿಸುವ ಡಿಜಿಟಲ್ ಪಬ್ಲಿಷಿಂಗ್ ಡೆಸ್ಕ ನ್ನು ಸಂಗೊಳ್ಳಿ ರಾಯಣ್ಣ ಘಟಕ ಪದವಿ ಮಹಾ ವಿದ್ಯಾಲಯ ಬೆಳಗಾವಿ ಇಲ್ಲಿ ಸ್ಥಾಪಿಸುವ ಸಲುವಾಗಿ ಮತ್ತು ವಿದ್ಯಾರ್ಥಿಗಳಿಗೆ ಭಾಷಾ ಕಲಿಕೆಯ ಗುಣಮಟ್ಟವನ್ನು ಅರಿವಿನ ಮೂಲಕ ಹೆಚ್ಚಿಸುವ ಸಲುವಾಗಿ ಕೊಗನಿಟಿವ್ ಲ್ಯಾಂಗ್ವೇಜ್ ಲರ್ನಿಂಗ್ ಲ್ಯಾಬ್ ಸ್ಥಾಪಿಸಲು ಈ ಬಗ್ಗೆ ಮುಂದಿನ ಕಾರ್ಯ ಚಟುವಟಿಕೆಗಳನ್ನ ಹಮ್ಮಿಕೊಳ್ಳಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಒಡಂಬಡಿಕೆಗೆ ಸಹಿ ಹಾಕಲಾಯಿತು. ವಿಶ್ವವಿದ್ಯಾಲಯದ ವ್ಯಾಪ್ತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಡಿಜಿಟಲ್ ಲೈಬ್ರರಿ, ಡಿಜಿಟಲ್ ಪುಸ್ತಕ ಓದಲು ಮತ್ತು ಭಾಷಾ ಕಲಿಕೆಗೆ ನೆರವಾಗಲು ಸದರಿ ಮಹತ್ವಕಾಂಕ್ಷಿ ಯೋಜನೆಗಳು ನೆರವಾಗಲಿವೆ ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.