*ಗಣೇಶ ಹಬ್ಬದ ನಿಮಿತ್ತ ಉನ್ನತ ರಕ್ಷಣೆಗಾಗಿ ಹಗಲು ರಾತ್ರಿ ಶ್ರಮಿಸಿದ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆ ಮಹಾನಗರ ಪಾಲಿಕೆ ಕೆಇಬಿ ಇಲಾಖೆಗೆ ಅಭಿನಂದನೆ* – ಮಹೇಶ ಎಸ್ ಶಿಗಿಹಳ್ಳಿ ಸಾಮಾಜಿಕ ಹೋರಾಟಗಾರ
ಯಾವುದೆ ಹಬ್ಬ ಹರಿದಿನಗಳು ಬಂದರೆ ಸಾಕು ಪೊಲೀಸ್ ಇಲಾಖೆಯ ಸಮಸ್ತ ಸಿಬ್ಬಂದಿಗಳು ಅಧಿಕಾರಿಗಳು ತಮ್ಮ ಕುಟುಂಬಕ್ಕೆ ಸಮಯ ಕೊಡದೆ ಸಾರ್ವಜನಿಕರ ರಕ್ಷಣೆಗೆ ನಿಲ್ಲುತ್ತಾರೆ. ಜನರ ರಕ್ಷಣೆಯೇ ಪೊಲೀಸ್ ಇಲಾಖೆಯ ಮೊದಲನೆಯ ಜವಾಬ್ದಾರಿ ಎಂದು ಹಬ್ಬ ಹರಿದಿನಗಳಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ತಮ್ಮ ಕುಟುಂಬದ ಸಂತೋಷದ ಸಮಯದಲ್ಲಿ ಬಾಗಿಯಾಗದೆ ಜನರ ರಕ್ಷಣೆಗೆ ನಿಲ್ಲುತ್ತಾರೆ . ಇದರಿಂದ ಎಷ್ಟೋ ಆಪತ್ತುಗಳು ಕೋಮು ಗಲಭೆಗಳು ಆಗದೆ ಶಾಂತತೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯು ಮುಖ್ಯ ಪಾತ್ರವಹಿಸಿದೆ. ಒಂದು ಕ್ಷಣ ಪೊಲೀಸ್ ಇಲಾಖೆ ಮೌನ ವಹಿಸಿದರೆ ಸಾಕು ನಮ್ಮ ರಾಜ್ಯದಲ್ಲಿ ಗಲ್ಲಿ ಗಲ್ಲಿಯಲ್ಲಿ ಗಲಾಟೆಗಳು ಸಂಭವಿಸುತ್ತದೆ . ಇದರಿಂದ ಸಾವಿರಾರು ಲಕ್ಷಾಂತರ ಜನರ ಜೀವಕ್ಕೆ ಹಾನಿಯಾಗುವ ಸಂಭವ ಇರುತ್ತದೆ. ಇವರ ಉತ್ತಮ ಕಾರ್ಯಕ್ಕಾಗಿ ಕರ್ನಾಟಕ ಪೊಲೀಸ್ ಇಲಾಖೆಗೆ ಸಮಸ್ತ ಕೋಟ್ಯಂತರ ಜನರ ಪರವಾಗಿ ಅಭಿನಂದನೆಗಳು ಹೇಳಲು ಬಯಸುತ್ತೇವೆ. ಬೆಳಗಾವಿ ಜಿಲ್ಲಾಧಿಕಾರಿಗಳು ಬೆಳಗಾವಿಯ ನಗರ ಪೊಲೀಸ್ ಆಯುಕ್ತರಾದ ಯಡಾ ಮಾರ್ಟಿನ್ ಮರ್ಮ್ಯಾಂಗ್ ಸಾಹೇಬರು ಎಸ್ ಪಿ ಭೀಮಾ ಶಂಕರ್ ರವರು ಡಿಸಿಪಿ ರೋಹನ್ ರವರ ನೇತೃತ್ವದಲ್ಲಿ ನಡೆದ ಪೊಲೀಸ ಜಾಗೃತಿ ಕಾರ್ಯಗಾರ ರ‍್ಯಾಲಿಯಲ್ಲಿ ಭಾಗವಹಿಸಿದ ಎಲ್ಲ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳಿಗೆ ಅಭಿನಂದನೆ ತಿಳಿಸುತ್ತೇವೆ ಮತ್ತು ಗಣೇಶ ಮೂರ್ತಿ ವಿಸರ್ಜನೆ ಸಂದರ್ಬದಲ್ಲಿ ನಿರಂತರವಾಗಿ ರಾತ್ರಿ ಹಗಲು 32 ಗಂಟೆಗಳ ಕಾಲ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಸಿಬ್ಬಂದಿಗಳು ಮತ್ತು ವಿದ್ಯುತ್ ಕೊರತೆ ಆಗದೆ ಇರುವ ನಿಟ್ಟಿನಲ್ಲಿ ಕೆಇಬಿ ಸಿಬ್ಬಂದಿಗಳು ಶ್ರಮಿಸಿದ್ದಾರೆ. ಬೆಳಗಾವಿ ಜನತೆಯಿಂದ ಶ್ಲಾಘನೆ ವ್ಯಕ್ತಪಡಿಸುತ್ತೇವೆ ಅಭಿನಂದಿಸುತ್ತೇವೆ ಎಂದು ಸಾಮಾಜಿಕ ಹೋರಾಟಗಾರ ಮಹೇಶ ಎಸ್ ಶಿಗೀಹಳ್ಳಿ ರವರು ಪ್ರಕಟಣೆಯಲ್ಲಿ ಹೇಳಿದರು.