23/12/2024
IMG-20240919-WA0043

ಬೆಳಗಾವಿ-೧೯: ದೇಶದ ಅಭಿವೃದ್ದಿಗೆ ಮತ್ತೊಂದು ಗರಿ ಎನ್ನುವಂತೆ ಒಂದು ದೇಶ, ಒಂದು ಚುನಾವಣೆಯ ಕಾರ್ಯಾನುಷ್ಠಾನಕ್ಕೆ ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‍ಡಿಎ ಸರಕಾರ ಮುಂದಾಗಿರುವದು ಸ್ವಾಗತಾರ್ಹ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬುಧವಾರ ಮಾಧ್ಯಮದವರ ಜೋತೆ ಮಾತನಾಡಿ,
‘ಒಂದು ದೇಶ, ಒಂದು ಚುನಾವಣೆ’ ನಡೆಸಬೇಕು ಎಂದು ನಡೆದ ಚಿಂತನೆಗೆ ಎನ್ ಡಿ ಎ ಸರ್ಕಾರದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿಯುನ್ನು ರಚಿಸಿದ್ದು ಸಮಿತಿ ನೀಡಿದ ವರದಿಯನ್ನು ಕೇಂದ್ರ ಸಚಿವ ಸಂಪುಟವು ಅಂಗೀಕರಿಸಿದೆ. ಇದು ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದ್ದು ಚುನಾವಣೆಯ ನೀತಿ ಸಂಹಿತೆಯಿಂದ ಅಭಿವೃದ್ಧಿ ಪರ ಕೆಲಸಕ್ಕೆ ಆಗುವ ವಿಳಂಬ ಮತ್ತು ತೊಂದರೆಯನ್ನು ತಪ್ಪಿಸಲಿದೆ.
ಚುನಾವಣಾ ಖರ್ಚುವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಿದೆ. ಜನರು ಪದೆ ಪದೆ ಮತದಾನದಲ್ಲಿ ಭಾಗವಹಿಸುವ ಸಮಯದ ಉಳಿತಾಯವಾಗಲಿದೆ ಎಂದು ತಿಳಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಕಾರಣಕ್ಕಾಗಿ ಈಗ ವಿಧಿಸುತ್ತಿರುವ ನಿರ್ಬಂಧವನ್ನು ತಪ್ಪಿಸಿ ಅಭಿವೃದ್ಧಿ ಕಾರ್ಯ ಸರಾಗವಾಗಿ ನಡೆಸಲು ಇದು ಪೂರಕ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಚುನಾವಣೆಯಲ್ಲಿ ನಡೆಯುವ ಅಕ್ರಮಗಳು ಹಾಗೂ ಭ್ರಷ್ಟಾಚಾರ ತಡೆಯಲು ಕೂಡ ಇದು ಪೂರಕ ಎಂದು ಅವರು ತಿಳಿಸಿದ್ದಾರೆ.

error: Content is protected !!