ಧಾರವಾಡ-೧೬:ಸತೀಶ ಜಾಧವ ಇವರು ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನಡಿಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ವಿಭಾಗದಿಂದ “ಪ್ರಗತಿಶೀಲರ ಅಂಕಣ ಸಾಹಿತ್ಯದಲ್ಲಿ ಆಶಯದ ವಿಭಿನ್ನ ನೆಲೆಗಳು”ಎಂಬ ವಿಷಯದಲ್ಲಿ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿ ಪ್ರದಾನ ಮಾಡಿದೆ.
ಇವರಿಗೆ ಬೆಳಗಾವಿಯ ಆರ್.ಪಿ.ಡಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಎಚ್. ಬಿ.ಕೋಲ್ಕಾರ ಅವರು ಮಾರ್ಗದರ್ಶಕರಾಗಿದ್ದರು. ಇವರಿಗೆ ಟ್ರಸ್ಟ್ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳು ಅಭಿನಂದಿಸಿದ್ದಾರೆ.