ಬೆಳಗಾವಿ-೧೫:ದೇವಸ್ಥಾನಗಳು ಸಂಸ್ಕ್ರತಿಯ ಪ್ರತೀಕ. ಇಲ್ಲಿ ಸಲ್ಲಿಸುವ ಪ್ರಾರ್ಥನೆಗಳಿಂದ ನಮಗೆ ಸಿಗುವ ನೆಮ್ಮದಿ ಬೇರೆಲ್ಲೂ ಸಿಗದು ಎಂದು ಬೆಳಗಾವಿ ವಿಶ್ರಾಂತ ಪ್ರಾದೇಶಿಕ ಆಯುಕ್ತ ಎಮ್ ಜಿ ಹಿರೇಮಠ ಹೇಳಿದರು. ಅವರು ಭಾನುವಾರ ಬೆಳಗಾವಿ ರಾಮತೀರ್ಥನಗರದ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕುಂಭ ಮೇಳದ ಮೆರೆವಣಿಗೆ ಉದ್ಘಾಟಿಸಿ ಮಾತನಾಡಿದರು. ನಮ್ಮಲ್ಲಿ ಭಯ ಭಕ್ತಿ ಇರಬೇಕು. ದೇವರ ಬಗ್ಗೆ ನಂಬುಗೆ ಬೇಕು. ಹನುಮಂತ ಶಕ್ತಿಯ ಪ್ರತೀಕ. ಅವನು ನಂಬಿದ ಭಕ್ತರ ಕೈ ಬಿಡನು ಎಂದರಲ್ಲದೆ, ರಾಮಾಯಣದಲ್ಲಿ ಹನುಮಂತನ ಭಕ್ತಿ ಮತ್ತು ಶಕ್ತಿಯ ಬಗ್ಗೆ ತಿಳಿಸಲಾಗಿದೆ ಎಂದರಲ್ಲದೆ, ರಾಮತೀರ್ಥನಗರದಲ್ಲಿಯ ಈ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ದ ಮಹಿಮೆಗೆ ಶಬ್ದಗಳು ಸಾಲದು ಎಂದರಲ್ಲದೆ, ದೇವಸ್ಥಾನದ ಅಭಿವ್ರದ್ಧಿಗೆ ಹಗಲಿರುಳು ಶ್ರಮಿಸಿದ ಅಧ್ಯಕ್ಷರಾದ ಸುರೇಶ ಉರಬಿನಹಟ್ಟಿ ಸಮಾಜದ ಒಂದು ಶಕ್ತಿ ಎಂದರಲ್ಲದೆ ಸನ್ಮಾನಿಸಿದ ಸಂಘಕ್ಕೆ ಧನ್ಯವಾದ ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿ ದೇವಸ್ಥಾನದ ಕಳಸಾರೋಹಣ ನೆರವೇರಿಸಿ ಮಾತನಾಡಿ, ನಮ್ಮಲ್ಲಿ ಸಮಾಜ ಸೇವಾ ಭಾವನೆ ಕಳೆದುಕೊಂಡು, ಬಡತನದಲ್ಲಿದ್ದೇವೆ. ನಮ್ಮತನದ ಗುಣ ಸ್ವಭಾವ ದಿಂದಾಗಿ ಏನನ್ನೂ ಸಾಧಿಸಲಾಗದ ಸ್ಥಿತಿ ನಮ್ಮದಾಗಿದೆ ಎಂದರಲ್ಲದೆ, ಗುಡಿ ನಿರ್ಮಾಣ ಮಾಡುವದು ಸಣ್ಣ ಕೆಲಸವಲ್ಲ . ಇದನ್ನು ಮಾಡಿದವರಿಗೆ ನಾವು ವಿಧೇಯರಾಗಿರಬೇಕು ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ನಿವ್ರತ್ತ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ಪಾಟೀಲ ಮಾತನಾಡಿ
ಪರಿಸರ ಶುಚಿತ್ವಕ್ಕೆ ಹೆಸರಾದ ಈ ದೇವಸ್ಥಾನ ಎಲ್ಲ ಭಕ್ತರಿಗೂ ಮಾದರಿ ಎಂದರು.
ವೇದಿಕೆಯಲ್ಲಿದ್ದ ಜಿಲ್ಲಾ ಕಾಂಗ್ರೇಸ್ ಅದ್ಯಕ್ಷರಾದ ವಿನಯ ನಾವಲಗಟ್ಟಿ ಈ ಸಂಘದ ಬೇಡಿಕೆಯಾದ ಭವನ ನಿರ್ಮಾಣಕ್ಕೆ ಯತ್ನಿಸುವ ಭರವಸೆ ನೀಡಿದರು. ಹನುಮಂತ ಕೊಂಗಾಲಿ, ಎನ್ ಬಿ ನಿರ್ವಾಣಿ, ಸುರೇಶ ಯಾದವ, ಕಾರ್ಯಕ್ರಮದ ಕುರಿತು ಪ್ರಶಂಸಿಸಿದರು. ರಾಜೇಂದ್ರ ಗೌಡಪ್ಪಗೋಳ, ಡಾ ಕಿರಣ ಉರಬಿನಹಟ್ಟಿ ಅಧ್ಯಕ್ಷರಾದ ಸುರೇಶ ಉರಬಿನಹಟ್ಟಿ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಸಂಘದ ಪರ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಳಸ ಹೊತ್ತ ಶ್ರಂಗರಿಸಿದ ವಾಹನವು
ರಾಮತೀರ್ಥ ನಗರದ ಪ್ರಮುಖ ಬೀದಿಗಳಲ್ಲಿ ಕುಂಭಗಳ ಹೊತ್ತ ಮಹಿಳೆಯರ ಮೆರವಣಿಗೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಅರ್ಜುನ ಉರಬಿನಹಟ್ಟಿ ಪ್ರಾರ್ಥಿಸಿದರು. ಅಧ್ಯಕ್ಷರಾದ ಸುರೇಶ ಉರಬಿನಹಟ್ಟಿ ಸ್ವಾಗತಿಸಿದರಲ್ಲದೆ, ಪ್ರಸ್ತಾವಿಕ ಮಾತನಾಡಿ, ಗುಡಿ ಕಟ್ಟಡಕ್ಕೆ ಅಗತ್ಯ ಸಹಾಯ, ಸಹಕಾರ ನೀಡಿದ ಸರ್ವರಿಗೆ ಧನ್ಯವಾದ ಹೇಳಿದರು.
ಪ್ರೊ.ಎ.ಕೆ ಪಾಟೀಲ ನಿರೂಪಿಸಿದರು.
ಸಂಘದ ಸದಸ್ಯರಾದ ಕ್ರಷ್ಣಾ ಪಾಟೀಲ, ಕಲ್ಲಪ್ಪ ಮಜಾಲಟ್ಟಿ, ಜಿ ಐ ದಳವಾಯಿ, ಮನೋಹರ ಕಾಜಗಾರ, ಡಿ ಎಂ ಟೊಣ್ಣೆ, ಮಹೇಶ ಚಿಟಗಿ, ಮಹೇಶ ಮಾವಿನಕಟ್ಟಿ, ಮಲ್ಹಾರ ದೀಕ್ಷಿತ, ಈರಣ್ಣ ಕಟ್ಟಾವಿ, ಎಸ್.ಜಿ.ಕಲ್ಯಾಣಿ, ಎಸ್.ಸಿ.ಕಮತ್, ಜಿ.ಎಸ್.ಪಾಟೀಲ್, ಎಸ್.ಎಲ್, ಸನದಿ, ಮಲ್ಲಪ್ಪ ದಂಡಿನವರ , ಬಸವರಾಜ ಗೌಡಪ್ಪಗೋಳ, ಸಿದ್ದಪ್ಪ ತೇರಣಿ, ರಾಜೇಂದ್ರ ರತನ್, ,ಸೇರಿದಂತೆ ಸಕಲ ಭಕ್ತರು, ಮಹಿಳೆಯರು ಹಾಜರಿದ್ದರು.
ಮಹಾಪ್ರಸಾದ ಜರುಗಿತು.