23/12/2024
IMG-20240902-WA0001

ಬೆಳಗಾವಿ-೦೨:ನಾವು ಎಷ್ಟೇ ಶ್ರೀಮಂತ, ಬಡವನಾದರೂ ನಮ್ಮ ಕನ್ನಡ ತಾಯಿ ಭುವನೇಶ್ವರಿ ನಮಗೆ ಪ್ರಥಮ ತಾಯಿ ಹಾಗೂ ನಮ್ಮ ಹೆಮ್ಮೆಯ ಭಾಷೆ ಕನ್ನಡ ನಮ್ಮ ರಕ್ತದ ಕಣ ಕಣದಲ್ಲಿ ಹಚ್ಚ ಹಸಿರಾಗಿ ಕನ್ನಡಕ್ಕಾಗಿ ಯಾವುದೇ ತ್ಯಾಗಕ್ಕೆ ಸಿದ್ದರಾಗಿ ಕನ್ನಡ, ಕನ್ನಡತನವನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಸದಾ ಸಿದ್ದರಾಗಿರಬೇಕೆಂದು ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು, ಕನ್ನಡ ಹಿರಿಯ ಸಾಹಿತಿಗಳು ಆದ ಯ ರು. ಪಾಟೀಲ ಹೇಳಿದರು.
ಭಾನುವಾರ ದಂದು ಆಯೋಜಿಸಲಾಗಿದ್ದ ಯುವ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಜಿಲ್ಲಾ ಘಟಕ ಉದ್ಘಾಟನೆ ಮತ್ತು ಕ ಯು ವೇ ಬೆಳಗಾವಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜಶೇಖರ ಎಮ್. ತಿಲಗಂಜಿ ಮಾತನಾಡಿ ನಾನು ಇಂತಹ ತುಂಬಿದ ಕನ್ನಡತನದ ಕಾರ್ಯಕ್ರಮ ಅದರಲ್ಲೂ ಗಂಡು ಮೆಟ್ಟಿನ ಜಿಲ್ಲೆ ಬೆಳಗಾವಿ ಕುಂದಾನಗರದಲ್ಲಿ ನಡೆಯುತ್ತಿರುವದು ಹೆಮ್ಮೆಯ ವಿಷಯ ಅಂದರು. ಈ ಒಂದು ಅದ್ಭುತ ಸಮಾರಂಭಕ್ಕೆ ಕಾರಣರಾದ ಜಿಲ್ಲಾ ಅಧ್ಯಕ್ಷ, ರಾಜ್ಯ ಉಪಾಧ್ಯಕ್ಷ, ಕಾರ್ಯದರ್ಶಿ, ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಉತ್ತಮ ಸಂಘಟನೆ ಮಾಡುತ್ತಿದ್ದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮಕ್ಕೆ ಬೆಳಗಾವಿ ನಾಗನೂರ ರುದ್ರಾಕ್ಷಿಮಠದ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು ಶುಭ ಹಾರೈಸಿದರು. ದಿವ್ಯಸಾನಿಧ್ಯವನ್ನು ಸುತಗಟ್ಟಿ ಹಿರೇಮಠದ ಶ್ರೀ ಸಿದ್ದಲಿಂಗ ದೇವರು ವಹಿಸಿ ಮಾತನಾಡಿ ಭಿಕ್ಷೆ ಬೇಡಿ ಮಠಗಳಲ್ಲಿ ಕನ್ನಡ ಶಿಕ್ಷಣ ವ್ಯವಸ್ಥೆ ನಡೆಸುತಿದ್ದ ಮಠಗಳ ಪರಂಪರೆ ಆದರ್ಶವಾಗಿತ್ತು ಎಂದರು.ಕಾರ್ಯಕ್ರಮದಲ್ಲಿ ಮದ್ಯಪಾನ ಸ್ವಯಂ ಮಂಡಳಿಯ ನಿಕಟ ಪೂರ್ವ ಅಧ್ಯಕ್ಷರಾದ ಮಲ್ಲಿಕಾರ್ಜುನ ತುಬಾಕಿ, ಯ ರು. ಪಾಟೀಲ, ಕನ್ನಡಪರ ಹಿರಿಯ ಚಿಂತಕರಾದ ಚುಂಚೆಗೌಡ, ಸಮಾಜ ಸೇವಕ ಬಸವರಾಜ ಬಳೆಕುಂದ್ರಿ, ಎಮ್ ಬಿ. ಹೊಸಳ್ಳಿ, ನಿಂಗಪ್ಪ ದುಳಪ್ಪನವರ, ಸಮಾಜ ಸೇವಕ ದಿಗ್ವಿಜಯ ಸಿದ್ನಾಳ ಇವರಿಗೆ ಕ ಯು ವೇ ಬೆಳಗಾವಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರು, ಸಂಸ್ಥಾಪಕರು ಸುನೀಲ್ ಎಂ ಎಸ್ ಮತ್ತು ರಾಜ್ಯ ಉಪಾಧ್ಯಕ್ಷರು ಮತ್ತು ಜಿಲ್ಲಾ ಉಸ್ತುವಾರಿಗಳು ಡಾ.ಮಹಾಂತೇಶ ಶಿ. ಕೂಲಿನವರ, ಡಿ ಡಿ ಎ ಬಿ ಡಿ ಸಿ ಸಿ ಬ್ಯಾಂಕ ನಿರ್ದೇಶಕರಾದ ಚುಂಚೇಗೌಡರು, ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ಶಿ ತುಬಾಕಿ, ಜಿಲ್ಲಾ ಕಾರ್ಯಧ್ಯಕ್ಷರು ಬಸವರಾಜ ಕುರಬೇಟ, ಜಿಲ್ಲಾ ಉಪಾಧ್ಯಕ್ಷರು ಉಮೇಶ ರೊಟ್ಟಿ ಮತ್ತು ಶಂಕರಗೌಡ ಪಾಟೀಲ, ಬೆಳಗಾವಿ ಯುವ ಘಟಕದ ಜಿಲ್ಲಾಧ್ಯಕ್ಷರು ಜ್ಯೋತಿಬಾ ದೇವದರ್ಶಿ, ಬೆಳಗಾವಿ ನಗರ ಘಟಕ ಅಧ್ಯಕ್ಷರು ಅಡಿವೇಪ್ಪ ಬಸನಗೌಡ ಪಾಟೀಲ,ಬೆಳಗಾವಿ ತಾಲ್ಲೂಕು ಅಧ್ಯಕ್ಷರಾದ ಸಮೀವುಲ್ಲಾ ಸನದಿ ಮತ್ತು ಬೆಳಗಾವಿ ತಾಲೂಕು ಉಪಾಧ್ಯಕ್ಷರು ಫಯಾಜ್ ಸನದಿ, ಬೈಲಹೊಂಗಲ ತಾಲ್ಲೂಕು ಅಧ್ಯಕ್ಷರು ರಾಚಪ್ಪ ಪಾಟೀಲ, ಬೈಲಹೊಂಗಲ ಕಾರ್ಯಧ್ಯಕ್ಷರು ಗುರು ಬಸಪ್ಪ ಮಲ್ಲೂರು ಮತ್ತು ಗೋಕಾಕ್ ಅಧ್ಯಕ್ಷರು ರಾಮಪ್ಪ ನಾಯಕ್ ಬೆಳಗಾವಿ ಜಿಲ್ಲೆ ಮಹಿಳಾ ಘಟಕದ ಕಾರ್ಯಧ್ಯಕ್ಷರು ರಾಜೇಶ್ವರಿ ಪಾಟೀಲ್ ಮತ್ತು ಬೆಳಗಾವಿ ಜಿಲ್ಲೆ ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾರತಿ ಪಾಟೀಲ, ಬೆಳಗಾವಿ ಮಹಿಳಾ ತಾಲ್ಲೂಕು ಅಧ್ಯಕ್ಷರು ಆಯೇಶಾ ಪಟಾನ್ ಕರ್ನಾಟಕ ಯುವರಕ್ಷಣಾ ವೇದಿಕೆ ಎಲ್ಲಾ ತಾಲೂಕು ಮತ್ತು ಮಹಿಳಾ ಗ್ರಾಮ ಘಟಕಗಳು ರೈತ ಘಟಕಗಳು, ಕಾರ್ಮಿಕ ಘಟಕಗಳು ಪದಾಧಿಕಾರಿಗಳು, ಹಾಜರಿದ್ದರು.

error: Content is protected !!