ಬೆಳಗಾವಿ-೨೮:ಸರ್ವರಿಗೂ ಶೃದ್ಧಾ ಕೇಂದ್ರವಾಗಿ, ಭಕ್ತರಿಗೆ ಬಂಧುವಾಗಿ ನಿಂತಿರುವ ಬೆಳಗಾವಿ ನಗರದ ಹುಕ್ಕೇರಿ ಹಿರೇಮಠ ಎಲ್ಲರನ್ನೂ ಗೌರವಿಸಿ ಆಶೀರ್ವದಿಸುತ್ತ ಬಂದಿದೆ ಎಂದು ಬೆಳಗಾವಿಯ ಹಿರಿಯ ಪುರೋಹಿತರಾದ ವಿಜಯ ಶಾಸ್ತ್ರೀಗಳು ಹೇಳಿದರು.
ಬುಧವಾರ ಬೆಳಗಾವಿ ನಗರದ ಲಕ್ಷ್ಮೀ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ರುದ್ರಾಭಿಷೇಕ, ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ಹುಕ್ಕೇರಿ ಹಿರೇಮಠದಲ್ಲಿ ಒಂದು ತಿಂಗಳವರೆಗೆ ಶ್ರಾವಣ ಪೂರ್ಣ ರುದ್ರಾಭಿಷೇಕ ಮತ್ತು ಸುವಿಚಾರ ಚಿಂತನೆಯ ಕಾರ್ಯಕ್ರಮವನ್ನು ಮಾಡುವುದರ ಜೊತೆಗೆ ಎಲ್ಲರಿಗೂ ಶೃದ ಕೇಂದ್ರವಾಗಿ ಹೊರ ಹೊಮ್ಮಿದೆ ಎಂದರು.
ಸಾನ್ನಿದ್ಯ ವಹಿಸಿ ಮಾತನಾಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ಭಕ್ತರಿಗಾಗಿ ಒಂದು ದಿನ ವಿಶೇಷವಾದ ಕಾರ್ಯಕ್ರಮ ಮಾಡಿ ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡುವುದರ ಮೂಲಕ ಭಕ್ತರಿಗೆ ಆಶೀರ್ವಾದ ಮಾಡುವ ಕಾರ್ಯ ಶ್ರೀಮಠ ಮಾಡುತ್ತ ಬಂದಿದೆ ಎಂದರು.
ಚಂದ್ರಶೇಖರಯ್ಯ ಸವಡಿ ಸಾಲಿಮಠ ಮಾತನಾಡಿ, ಬೆಳಗಾವಿ ಹುಕ್ಕೇರಿ ಹಿರೇಮಠ ಗುರುಗಳು ಸ್ವತಃ ಭಕ್ತರಿಗೆ ಪ್ರಸಾದವನ್ನು ನೀಡಿ ಮಕ್ಕಳಂತೆ ಕಾಣುತ್ತಿರುವ ಅಪರೂಪದ ಪುಜ್ಯರು ಎಂದರು.
ಶ್ರೀಮಠದಲ್ಲಿ ಭಕ್ತರಿಂದ ವಿಶೇಷವಾದ ಪಾದ ಪುಜೆಯನ್ನು ಹುಕ್ಕೇರಿ ಹಿರೇಮಠದ ಶ್ರೀಗಳಿಗೆ ನೆರವೆರಿಸಿದರು.
ಮಂಜುನಾಥ ಕರಡಗಿ ಸೇರಿದಂತೆ ಅನೇಕ ಗಣ್ಯಮಾನ್ಯರು ಹಾಜರಿದ್ದರು.