23/12/2024
IMG-20240809-WA0001

ಬೆಂಗಳೂರು-09 : ಬೆಳಗಾವಿಯ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಪಿ.ವಿ.ಸ್ನೇಹಾ ಅವರನ್ನು ವರ್ಗಾವಣೆ ಮಾಡಲಾಗಿದ್ದು, ನಿರಂಜನ ರಾಜೇ ಅರಸ್ ನೂತನ ಡಿಸಿಪಿಯಾಗಿ ಬರಲಿದ್ದಾರೆ. ಸ್ನೇಹಾ ಲೋಕಾಯುಕ್ತ ಎಸ್ಪಿಯಾಗಿ ವರ್ಗಾವಣೆಯಾಗಿದ್ದಾರೆ.

ರಾಮನಗರ ಹೆಚ್ಚುವರಿ ಎಸ್ಪಿ ಲಕ್ಷ್ಮೀನಾರಾಯಣ ಅವರನ್ನು ಲೋಕಾಯುಕ್ತ ಎಸ್ಪಿಯಾಗಿ, ತುಮಕೂರು ಹೆಚ್ಚುವರಿ ಎಸ್ಪಿ ಎನ್.ಎಚ್.ರಾಮಚಂದ್ರಯ್ಯ ಅವರನ್ನು ರಾಮನಗರ ಹೆಚ್ಚುವರಿ ಎಸ್ಪಿಯಾಗಿ, ಚಿತ್ರದುರ್ಗದ ಹೆಚ್ಚುವರಿ ಎಸ್ಪಿ ಅಬ್ದುಲ್ಖಾದರ್ ಅವರನ್ನು ತುಮಕೂರು ಹೆಚ್ಚುವರಿ ಎಸ್ಪಿಯಾಗಿ, ಚಾಮರಾಜ ನಗರ ಹೆಚ್ಚುವರಿ ಎಸ್ಪಿ ಉದೇಶ ಅವರನ್ನು ಲೋಕಾಯುಕ್ತ ಎಸ್ಪಿಯಾಗಿ, ಮೈಸೂರು ಹೆಚ್ಚುವರಿ ಎಸ್ಪಿ ನಂದಿನಿ ಅವರನ್ನು ಲೋಕಾಯುಕ್ತ ಎಸ್ಪಿಯಾಗಿ ಹಾಗೂ ಡಿಸಿಆರ್ ಇ ಎಸ್ಪಿ ಧನಂಜಯ ಅವರನ್ನು ಲೋಕಾಯುಕ್ತ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !!