23/12/2024
IMG-20240728-WA0036

*ಕದಡಿದ ಮನಸ್ಸನ್ನು ಶಾಂತ ಗೊಳಿಸುವ ಶಕ್ತಿ ಸಂಗೀತಕ್ಕಿದೆ* : ಗುರುಸಿದ್ಧ ಮಹಾಸ್ವಾಮಿಜಿ

ಸ್ನೇಹಿತರೊಂದಿಗೆ ಆನಂದಿಸುವಾಗ, ಒಂಟಿತನದಲ್ಲಿದ್ದಾಗ, ಪ್ರಯಾಣಿಸುವಾಗ, ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾಗ ಹೀಗೆ ನಮ್ಮ ಜೀವನದ ಪ್ರತಿಯೊಂದು ಭಾಗದಲ್ಲೂ ಸಂಗೀತ ಹಾಸುಹೊಕ್ಕಾಗಿದೆ. ಸಂತೋಷದಲ್ಲಿದ್ದಾಗ ಖುಷಿಯನ್ನು ಇಮ್ಮಡಿಗೊಳಿಸುವ ಹಾಗೂ ಕದಡಿದ ಮನಸ್ಸುಗಳ ಶಾಂತಗೊಳಿಸುವ ಶಕ್ತಿ ಸಂಗೀತಕ್ಕಿದೆ ಎಂದು ಕಾರಂಜಿ ಮಠದ ಗುರುಸಿದ್ಧ ಸ್ವಾಮಿಗಳು ಅಭಿಪ್ರಾಯಪಟ್ಟರು ರವರು ಶನಿವಾರ ಶಿವಬಸವ ನಗರದ ಕಾರಂಜಿ ಮಠದಲ್ಲಿ ಜರುಗಿದ ಶಾರದಾ ಸಂಗೀತ ವಿದ್ಯಾಲಯದ ರಜತ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾರಂಭದ ನೇತೃತ್ವ ವಹಿಸಿ ಆಶೀರ್ವಚನ ನೀಡಿದ ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ ಶಿವಯೋಗ ಮಂದಿರವನ್ನು ಅಭಿವೃದ್ಧಿಪಡಿಸುವಲ್ಲಿ ಸಪ್ತ ಋಷಿಗಳಂತೆ ಸ್ವಾಮೀಜಿಯವರು ಪ್ರಯತ್ನಪಟ್ಟರೆ, ಕೆ.ಎಲ್.ಇ.ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಸಪ್ತಋಷಿಗಳಾದ ಶಿಕ್ಷಕರು ಪಾತ್ರ ದೊಡ್ಡದಾಗಿದೆ. ಅದೇ ರೀತಿ ಶಾರದಾ ಸಂಗೀತ ವಿದ್ಯಾಲಯವನ್ನು ಸುನಿತಾ ಪಾಟೀಲ ಅವರ ಸಪ್ತ ಶಿಷ್ಯಂದಿರು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿರುವುದು ಸಂತಸದ ಸಂಗತಿ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ತಬಲಾ ವಾದಕ ಗಜಾನನ ಕುಲಕರ್ಣಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ರತ್ನಪ್ರಭಾ ಬೆಲ್ಲದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಶಾರದಾ ಸಂಗೀತ ವಿದ್ಯಾಲಯದ ಸಂಸ್ಥಾಪಕರಾದ ಸುನಿತಾ ಕಿರಣ್ ಪಾಟೀಲ್ ಅವರಿಗೆ ಸಂಗೀತ ಶಾರದೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕಿಯರಾದ ನಯನ ಗಿರಿಗೌಡ, ನೇತ್ರಾ ಜೋಶಿ, ಅಪರ್ಣಾ ಕರಿಕಟ್ಟಿ ಸೇರಿದಂತೆ ಇತರರು ಹಾಜರಿದ್ದರು.

error: Content is protected !!