23/12/2024
IMG-20240726-WA0004

ಬೆಳಗಾವಿ-26: ದೇಶದ ಅಭಿವೃದ್ಧಿಗೆ, ಸಮೃದ್ಧ ರಾಷ್ಟ, ರಾಷ್ಟ ನಿರ್ಮಾಣ ಮಾಡುವಲ್ಲಿ ಯೋಧರ, ರೈತರ, ಶಿಕ್ಷಕರ ಕೊಡುಗೆ ಅಪಾರ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಗಂಗಾವತಿ ಅವರು ತಿಳಿಸಿದರು.

ಶುಕ್ರವಾರ ನಡೆದ ಬೆಳಗಾವಿ ಜಿಲ್ಲೆಯ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮತ್ತು ರೋಟರಿ ಕ್ಲಬ್ ಆಪ್ ವೇಣುಗ್ರಾಮ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ 25ನೇ ಕಾರ್ಗಿಲ್ ವಿಜಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿರುವ ಜನರು ಶಾಂತಿ, ನೆಮ್ಮದಿಯಿಂದ ಇರಲು ಯೋಧರ ಪಾತ್ರ ಬಹುಮುಖ್ಯವಾಗಿ. ದೇಶದ ರಕ್ಷಣೆಗಾಗಿ ಗಡಿಯಲ್ಲಿ ನಿರಂತರ ಶ್ರಮಿಸುವ ಯೋಧರು ನಮ್ಮೆಲ್ಲರ ಹಿತಕ್ಕಾಗಿ ಕಾಯುವವರು. ಅವರು ನಮ್ಮ ಶ್ರೀರಕ್ಷೆ. ಅನದಾತರು ದೇಶದ ಆಸ್ತಿ, ಅವರು ಮಳೆ-ಗಾಳಿ ಎನ್ನದೇ ದುಡಿದು ದೇಶಕ್ಕೆ ಅನ್ನ ನೀಡುವವರು. ರೈತರ ಶ್ರಮ ಫಲವೇ ನಾವಿಂದೂ ಶ್ರೇಷ್ಠವ್ಯಕ್ತಿಗಳು ಆಗಲು ಸಾಧ್ಯವಾಗಿದೆ. ಮತ್ತು ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ ಅಪಾರವಾಗಿದೆ, ಶಿಕ್ಷಕರನ್ನು ಗುರುತಿಸಿ, ಗೌರವಿಸಬೇಕು. ಅವರ ತ್ಯಾಗ, ಪರಿಶ್ರಮವನ್ನು ಈ ನಾವೆಲ್ಲ ನೆನೆಯುಬೇಕು. ಈ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ವೃತ್ತಿ ಎಂದರೇ ಅದು ಶಿಕ್ಷಕ ವೃತ್ತಿ ಎಂದು ಹೇಳಿದರು.

ಡಾ. ಸೋನಾಲಿ ಸರ್ನೋಬತ್ ಮಾತನಾಡಿ, ದೇಶಕ್ಕಾಗಿ ಸರ್ವಸ್ವವನ್ನು ಅರ್ಪಿಸಿದ ಯೋಧರ ಆದರ್ಶ ನಮ್ಮ ಬದುಕಿನ ಬೆಳಕಾಗಬೇಕು.ದೇಶ ಕಾಯಲು ಮನೆ, ಕುಟುಂಬ ಸದಸ್ಯರಿಂದ ದೂರವಾಗಿದ್ದುಕೊಂಡು ದೇಶ ರಕ್ಷಣೆಗೆ ಲಕ್ಷಾಂತರ ಯೋಧರ ಗಡಿಯಲ್ಲಿ ಕೆಲಸ ಮಾಡುತ್ತಾರೆ. ಅವರ ಸೇವೆ ತ್ಯಾಗವನ್ನು ಸದಾ ಸ್ಪಂದಿಸುವ ಕೆಲಸವಾಗಬೇಕು, ಸಾಧ್ಯವಾದರೆ ನಿಮ್ಮ ಮಕ್ಕಳನ್ನು ಸೇನೆಗೆ ಸೇರಿಸಿ ದೇಶ ಸೇವೆಗೆ ಕಳುಹಿಸಬೇಕು ಎಂದರು.

25ನೇ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಬೃಹತ್ ಬೈಕ್ ರ‍್ಯಾಲಿ:
ಭಾರತೀಯ ಸೇನೆಯ ಶೌರ್ಯ ಮತ್ತು ತ್ಯಾಗಕ್ಕೆ ಗೌರವವಾಗಿ, 25 ವರ್ಷಗಳ ಕಾರ್ಗಿಲ್ ವಿಜಯ್ ದಿವಸ್ ಸ್ಮರಣಾರ್ಥ ನಿಮಿತ್ತವಾಗಿ‌ ನಗರದ ಅಶೋಕ ವೃತ್ತದಿಂದ ಕುಮಾರ ಗಂಧರ್ವ ರಂಗಮಂದಿರ ವರೆಗೂ ಬೃಹತ್ ಬೈಕ್ ರ‍್ಯಾಲಿ ನಡೆಸಲಾಯಿತು. ನೂರಾರು ಯೋಧರು ಬೈಕ್ ರ‍್ಯಾಲಿಯಲ್ಲಿ ಭಾಗಿಯಾಗಿ ದೇಶಕ್ಕಾಗಿ ಪ್ರಾರ್ಣಾಪಣೆ ಮಾಡಿದ ಯೋಧರನ್ನು ಸ್ಮರಿಸಿ, ಗೌರವ ನಮನ ಸಲ್ಲಿಸಿದರು.

“ಅಮರ ಜವಾನ್‌ ಜ್ಯೋತಿ” ಗೆ ಪುಷ್ಪ ನಮನ

ಬಳಿಕ, ಕುಮಾರ ಗಂಧರ್ವ ರಂಗಮಂದಿರಲ್ಲಿ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಣೆ ಸಂಬಂಧಿಸಿದಂತೆ ನೂರಾರು ಸೈನಿಕರು ಗಣ್ಯರು ಭಾಗವಹಿಸಿ, “ಅಮರ ಜವಾನ್‌ ಜ್ಯೋತಿ” ಗೆ ಪುಷ್ಪ ನಮನದ ಮೂಲಕ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟ ಅಧ್ಯಕ್ಷ ಜಗದೀಶ ಪೂಜಾರಿ, ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿನಯ ಕುಮಾರ್ ಬಾಳಿಕಾಯಿ, ಸೌಮ್ಯಾ ಬೆಂಗಳೂರು, ವೀಣಾ ವಿಜಾಪೂರೆ, ಮಂಗಲಾ ಮಠದ, ಶಿವನಗೌಡ ಪಾಟೀಲ್, ನಾಗರತ್ನ ರಾಮಗೌಡ, ರಮೇಶ ಚೌಗಲಾ ದಯಾನಂದ ಢಾಳಿ, ಸೋಮನಾಥ ಕುಡಚಿಕರ್‌, ಬಸವಂತಪ್ಪ ಕಾರಾಂವಿ. ಮಲ್ಲಪ್ಪಾ ಕಂಕಣವಾಡಿ, ಶಿಕ್ಷಕ ರಾಜಶೇಖರ ಸುರೇಶ ಹಂಜಿ ಸ್ವಾಗತಿಸಿದರು.ನೇಗಿನಹಾಳ ನಿರೂಪಿಸಿದರು. ಶಿವಬಸಪ್ಪ ಕಾಡನ್ನವರ ವಂದಿಸಿದರು.ಕಾರ್ಯಕ್ರಮ ದಲ್ಲಿ ಇತರರು ಹಾಜರಿದ್ದರು.

error: Content is protected !!