ಬೆಳಗಾವಿ-24: ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಬುಧವಾರ ಬೆಳಗಾವಿಯ ಶ್ರೀನಗರ, ಶ್ರೀರಾಮ್ ಕಾಲೋನಿ, ಕ್ಲಬ್ ರೋಡ್‌ನ ಜ್ಯೋತಿ ಕಾಲೇಜ್ ಸಮೀಪ ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದ ಮರಗಳನ್ನು ಹೆಸ್ಕಾಂ ಸಿಬ್ಬಂದಿ ತೆರವುಗೊಳಿಸಿದ್ದಾರೆ.
ಅಲಾರವಾಡ್ ಗ್ರಾಮದಲ್ಲಿ ವಿದ್ಯುತ್ ಕಂಬ ಧರೆಗುರುಳಿದ್ದು, ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗಳನ್ನು ಮರುಜೋಡಿಸುವ ಹಾಗೂ ವಿದ್ಯುತ್ ಪುನರ್‌ಸ್ಥಾಪಿಸುವ ಕಾರ್ಯ ನಡೆದಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.