ಬೆಳಗಾವಿ-23:ಬೆಳಗಾವಿ ಸರ್ವಲೋಕಾ ಸೇವಾ ಫೌಂಡೇಶನ್ ನ ಸಂಸ್ಥಾಪಕ, ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ನೇತೃತ್ವದಲ್ಲಿ ರಾಮದುರ್ಗ ತಾಲೂಕಿನ ಸುಲದಳ್ಳಿಯ ತಿಪ್ಪಲಕಟ್ಟಿ ಗ್ರಾಮದ ಬೃಹನ್ ಮಠದ ಆವರಣದಲ್ಲಿ ಬಿಲ್ವ ಪತ್ರೆಯ ಗಿಡ ನೆಡವು ಮೂಲಕ ಗುರುಪೂರ್ಣಿಮೆಯನ್ನು ಭಾನುವಾರ ಶೃದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೀರೇಶ ಬಸಯ್ಯ ಹಿರೇಮಠ ಓರ್ವ ವ್ಯಕ್ತಿ ಯಶಸ್ಸನ್ನು ಸಾದಿಸಬೇಕೆಂದರೆ ಅವನ ಮುಂದೆ ಗುರಿ ಇರಬೇಕು, ಹಿಂದೆ ಗುರುವಿರಬೇಕು ಎನ್ನುವ ನಂಬಿಕೆಯಿದೆ. ಗುರುವಿಲ್ಲದೆ ಜೀವನಕ್ಕೆ ಅಥವಾ ಜ್ಞಾನಕ್ಕೆ ಯಾವುದೇ ರೀತಿಯ ಅರ್ಥವಿರುವುದಿಲ್ಲ. ನಮ್ಮ ಮೊದಲ ಗುರು ತಾಯಿ ನಮಗೆ ಜೀವನದ ಅರ್ಥವನ್ನು ನೀಡುತ್ತಾಳೆ. ಅದೇ ರೀತಿ ಜೀವನಕ್ಕೆ ಅಗತ್ಯವಾದ ಜ್ಞಾನವನ್ನು ಗುರು ನೀಡುತ್ತಾನೆ. ಅಂದರೆ, ಗುರುವಿಲ್ಲದೆ ಏನೂ ಸಾಧ್ಯವಿಲ್ಲ ಎಂದರು.
ಕತ್ತಲೆಯನ್ನು ತೆಗೆದು ಹಾಕಿ ಬೆಳಕನ್ನು ನೀಡುವವನೇ ಗುರು ಎಂದು ಹೇಳಲಾಗುತ್ತದೆ. ಅಂದರೆ ಓರ್ವ ವ್ಯಕ್ತಿಯ ಅಜ್ಞಾನವನ್ನು ತೆಗೆದುಹಾಕಿ ಜ್ಞಾನವೆನ್ನುವ ಬೆಳಕನ್ನು ನೀಡುತ್ತಾನೆ. ಪ್ರಾಚೀನ ಕಾಲದಲ್ಲಿ, ಶಿಷ್ಯರು ಗುರುವಿನ ಆಸ್ರಮದಲ್ಲಿ ಉಚಿತ ಶಿಕ್ಷಣವನ್ನು ಪಡೆಯುತ್ತಿದ್ದರು. ಆಶ್ರಮದಲ್ಲಿ ಶಿಷ್ಯರು ಗುರುವನ್ನು ಪ್ರತಿನಿತ್ಯ ಪೂಜಿಸಿ ತಮ್ಮ ಅಭ್ಯಾಸವನ್ನು ಆರಂಭಿಸುತ್ತಿದ್ದರು. ಆ ಪದ್ಧತಿ ಈಗಲೂ ಮುಂದುವರೆಯಬೇಕು ಎಂದರು.
ಈ ಸಂದರ್ಭದಲ್ಲಿ ಶ್ರೀ ಗುರುಸಿದ್ಧ ಸ್ವಾಮೀಜಿ, ನೀಲಕಂಠಯ್ಯ ಶಾಸ್ತ್ರೀ ಹಿರೇಮಠ, ರವಿಕಿರಣ ಹೆಗ್ಗೆರಿ, ಸಂತೋಷ ದೇಸೂರ, ಪವನಕುಮಾರ ಹಿರೇಮಠ ಸೇರಿದಂತೆ ಸುಲದಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.