23/12/2024
IMG-20240719-WA0001

ನೇಸರಗಿ-19:ಜೀವನದಲ್ಲಿ ಬಡವರಾಗಿ ಹುಟ್ಟಿದವರು ಒಳ್ಳೆಯ ವಿದ್ಯಾಭ್ಯಾಸ ಮಾಡಿ ಐ ಎ ಎಸ್, ಐ ಪಿ ಎಸ್, ವೈದ್ಯರಾಗಿ, ಅನೇಕ ಉನ್ನತ ಮಟ್ಟದ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದಕ್ಕೆ ಕಾರಣ ಅವರ ವಿದ್ಯಾಭ್ಯಾಸ ಸಮಯದಲ್ಲಿ ಕಷ್ಟ ಪಟ್ಟು ಪರಿಶ್ರಮದ ವ್ಯಾಸಂಗ ಮಾಡಿ ಸಾಧನೆ ಮಾಡಿದ್ದಾರೆ. ಅದಕ್ಕಾಗಿ ತಾವು ಕೂಡಾ ಪರಿಶ್ರಮದಿಂದ ವ್ಯಾಸಂಗ ಮಾಡಿದರೆ ಬಡವರಾಗಿ ಹುಟ್ಟಿದ್ದು ತಪ್ಪಲ್ಲ ಆದರೆ ಬಡವರಾಗಿ ಬದುಕುವದು ತಪ್ಪು ಎಂದು ಕೆ ಪಿ ಸಿ ಸಿ ಸದಸ್ಯರು, ಮಾಜಿ ಜಿ ಪಂ ಸದಸ್ಯರಾದ  ರೋಹಿಣಿ ಪಾಟೀಲ ಹೇಳಿದರು.
ಅವರು ಶುಕ್ರವಾರದಂದು ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ನೇಸರಗಿಯಲ್ಲಿ ನಡೆದ ಮತದಾನ ಸಾಕ್ಷರತ ಅಭಿಯಾನ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ, ಕ್ರೀಡೆ, ಸಂಸ್ಕೃತಿಕ, ಎನ್ ಎಸ್ ಎಸ್ ವಿದ್ಯಾರ್ಥಿಗಳ ಸಂಘ, ಸೇವಾ ಸಂಘದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಆಟ, ಪಾಠದ ಜೊತೆ ಎಂಜಾಯ್ ಮಾಡುದದು ಸಹಜ ಆದರೆ ಅತಿಯಾದ ಮೋಜು ಮಸ್ತಿ ಮುಂದಿನ ತಮ್ಮ ಜೀವನದಲ್ಲಿ ಹಿನ್ನಡೆ ಆಗುತ್ತದೆ. ತಾವುಗಳು ಚೆನ್ನಾಗಿ ಅಭ್ಯಾಸ ಮಾಡಿ ರಾಜಕೀಯ, ಧರ್ಮ ರಹಿತ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ತಮ್ಮ ಜೀವನ ರೂಪಿಸಿಕೊಂಡು ಸಮಾಜದಲ್ಲಿ ಮುಂದೆ ಬಂದು ಕೀರ್ತಿವಂತರಗಬೇಕು ಎಂದು ಹೇಳಿದರು.
ಮಾಜಿ ಜಿ ಪಂ ಸದಸ್ಯ ಹಾಗೂ ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಪ್ಪ ಅರಿಕೇರಿ ಮಾತನಾಡಿ ಸರ್ಕಾರ ಉನ್ನತ ಮಟ್ಟದ ಶಿಕ್ಷಣ ನೀಡುತ್ತಿದ್ದು, ಶಾಸಕರು ಶಿಕ್ಷಣ ಪ್ರೇಮಿಗಳಾಗಿದ್ದು ಶಿಕ್ಷಣ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ ಇದರ ಸದುಪಯೋಗ ವಿದ್ಯಾರ್ಥಿಗಳು ಪಡಿಸಿಕೊಳ್ಳಬೇಕು ಎಂದರು.
ಪ್ರಾಂನ್ಸುಪಾಲರಾದ ಎನ್ ಎಮ್ ಕುದರಿಮೋತಿ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಶ್ರದ್ದೆ, ಛಲದಿಂದ ವಿದ್ಯಾಭ್ಯಾಸ ಮಾಡಿ ಪಾಲಕರ, ಶಿಕ್ಷಕರ ಘನತೆ ಹೆಚ್ಚಿಸುವ ಕಾರ್ಯ ಮಾಡಬೇಕು ಎಂದರು.ಉಪನ್ಯಾಸಕ, ನಿವೃತ್ತ ಸೈನಿಕ ಜಯರಾಜ ಎಸ್. ದರೂರ ಅತಿಥಿ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜು ಸುಧಾರಣೆ ಸಮಿತಿ ಉಪಾಧ್ಯಕ್ಷ ಬಸವರಾಜ ಚಿಕ್ಕನಗೌಡ್ರ, ಮಹಾಂತೇಶ್ ಸತ್ತಿಗೇರಿ, ಸುರೇಶ ಅಗಸಿಮನಿ, ಶ್ರೀಮತಿ ಗೀತಾ ಕಂಡ್ರಿ, ಬಸವರಾಜ ಕಾರಜೋಳ,ಬಾಳಪ್ಪ ಕುಂಟಗಿ, ವಿನಾಯಕ ಮಾಸ್ತಮಾರ್ಡಿ, ಗಂಗಾಧರ ಮಾವಿನಕಟ್ಟಿ,ಬಾಬು ಬಾಗವಾನ, ಶ್ರೀಕಾಂತ್ ತರಗಾರ, ಎಸ್ ವಿj ದೊಡಮನಿ,ಎಮ್ ಎಸ್. ಬೆಟಗೇರಿ, ಶ್ರೀಮತಿ ರೇಣುಕಾ ನಿಂಬಾಳ, ನಿರೂಪಣೆಯನ್ನು ಚಂದ್ರಕಲಾ ರೊಟ್ಟಿ, ಸಂದ್ಯಾ ವಿಶ್ವಾನಾಥ್ ಕಟ್ಟಿಮನಿ ನೆರವೇರಿಸಿದರು,ಭೋದಕ, ಭೋದಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

error: Content is protected !!