23/12/2024
IMG-20240714-WA0000

ಬೆಳಗಾವಿ-14:ಬೆಳಗಾವಿ ಜಿಲ್ಲೆ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟ ಬೆಳಗಾವಿ ಇವರ ವತಿಯಿಂದ ಶನಿವಾರ ದಂದು ನಗರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಿಸುತ್ತಿರುವ ಸಂಭ್ರಮದಲ್ಲಿ ಆ ಕಾರ್ಗಿಲ್ ಯುದ್ಧದ ವಿಜಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಯೋಧರ ಕುಟುಂಬದವರ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿ ಅವರ ಅನುಭವಿಸುತ್ತಿರುವ ಕಷ್ಟವನ್ನು ಸರ್ಕಾರದ ಗಮನಕ್ಕೆ ತಂದು ಸರಕಾರ ಅವರ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿಯನ್ನು ನೀಡಬೇಕೆಂಬ ಮನವಿಗೋಸ್ಕರ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿತ್ತು.
ಆದಷ್ಟು ಬೇಗನೆ ಹುತಾತ್ಮ ಯೋಧರ ಮಕ್ಕಳ ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸಿ ಹುತಾತ್ಮ ವೀರಯೋಧರ ಕುಟುಂಬಗಳಿಗೆ ಸೇರಿದ ನೆರವಾಗಬೇಕೆಂದು ಮಹಾ ಒಕ್ಕೂಟದ ಅಧ್ಯಕ್ಷರಾದ ಶ್ರೀ ಜಗದೀಶ ಪೂಜೇರಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಹಾ ಒಕ್ಕೂಟದ ಗೌರವಾಧ್ಯಕ್ಷರಾದ ಶ್ರೀ ರಮೇಶ ಚೌಗುಲಾ ಉಪಾಧ್ಯಕ್ಷರಾದ ಸಂಗಪ್ಪ ಮೇಟಿ ಪ್ರಧಾನ ಕಾರ್ಯದರ್ಶಿಗಳಾದ ಶಿವಸಪ್ಪ ಕಾಡನ್ನವರ, ಪ್ರಾಧಿಕಾರಗಳಾದ ಗಣಪತಿ ದೇಸಾಯಿ, ಬಸವಂತಪ್ಪ ಕಾರಾಂವಿ, ಮಹೇಶ ಕುಮ್ಮಾರ ಬಸವಂತಪ್ಪ ಮೂಗಡ್ಲಿ ಹಾಗೂ ಹುತಾತ್ಮರಾದ ವೀರಯೋಧರ ಪತ್ನಿಯರು ಅವರ ಕುಟುಂಬದವರು ಉಪಸ್ಥಿತರಿದ್ದರು.

error: Content is protected !!