23/12/2024
IMG-20240713-WA0004

ಬೆಳಗಾವಿ-13: ಬೆಳಗಾವಿ ಲೋಕಸಭಾ ಸಂಸದ ಜಗದೀಶ್ ಶೆಟ್ಟರ್ ಅವರು ಬಿಜೆಪಿಯ ಸರಕಾರದ ಅವಧಿಯಲ್ಲಿ ಬೆಳಗಾವಿ ನಗರದ ಸ್ಥಳೀಯ ಬಿಜೆಪಿ ನಾಯಕರು ಬುಡಾದಲ್ಲಿ ನಡೆಸಿದ ಭ್ರಷ್ಟಾಚಾರದ ಕುರಿತು ಮಾತನಾಡದ ಅವರು ಮೈಸೂರು ‌ಮೂಡಾ ಹಗರಣದ ಬಗ್ಗೆ ಮಾತನಾಡವ ನೈತಿಕ ಹಕ್ಕಿಲ್ಲ ಎಂದು ರಾಜಕುಮಾರ ಟೋಪಣ್ಣವರ ಹೇಳಿದ್ದಾರೆ.

ಬೆಳಗಾವಿ ನಗರದ ಬಿಜೆಪಿ ನಾಯಕರು ಬುಡಾ ಅಧಿಕಾರಿಗಳ ಮೂಲಕ ಆಕ್ಸನ್ ಮಾಡದೆ ಸೈಟ್ ಹಂಚಿಕೆ ಮಾಡಿ ಸರಕಾರಕ್ಕೆ ಕೋಟ್ಯಂತರ ರೂ. ನಷ್ಟ ಮಾಡಿದ್ದಾರೆ. ಇದು ಬೆಳಗಾವಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ ಎನ್ನುವುದನ್ನು ಸಂಸದ ಶೆಟ್ಟರ್ ಅವರು ಮರೆತಿರುವಂತೆ ಕಾಣುತ್ತದೆ ಎಂದು ಲೇವಡಿ ಮಾಡಿದ್ದಾರೆ.
ಮೈಸೂರು ಮುಡಾ ಹಗರಣದ ಬಗ್ಗೆ ಮೈಸೂರಿನಲ್ಲಿ ಮಾತನಾಡುವ ಸಂಸದ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಬುಡಾ ಹಗರಣ ಹಾಗೂ ನಗರದ ಬಿಜೆಪಿ ನಾಯಕರು ಸ್ಮಾರ್ಟ್ ಸಿಟಿಯಲ್ಲಿ ಮಾಡಿರುವ ಭ್ರಷ್ಟಾಚಾರದ ಜಿಲ್ಲೆಯ ಜನರಿಗೆ ತಿಳಿದಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಶೆಟ್ಟರ್ ಅವರಿಗೆ ಇದ್ದರೆ ಬುಡಾ ಹಗರಣದ ಬಗ್ಗೆ ಮಾತನಾಡಲಿ ಎಂದು ಸವಾಲ್ ಹಾಕಿದರು.
ಬಸವೇಶ್ವರ ವೃತ್ತದಲ್ಲಿ ನಿರ್ಮಾಣವಾಗಿರುವ ತಿನಿಸು ಕಟ್ಟೆಯ ಮಳಿಗೆ ಹಂಚಿಕೆಯಲ್ಲಿ ಭ್ರಷ್ಟಾಚಾರ, ರಾಜ್ಯ ಸರಕಾರದಿಂದ ಕೋಟ್ಯಂತರ ರೂ. ವೆಚ್ಚ ಮಾಡಿ‌ ನೂತನವಾಗಿ ನಿರ್ಮಾಣ ಮಾಡಿರುವ ಎಪಿಎಂಸಿ ಪ್ರಾಂಗಣದಲ್ಲಿ ಬೃಹತ್ ಮಳಿಗೆಗಳನ್ನು‌ ನಿರ್ಮಿಸಿದರು. ಬೆಳಗಾವಿ ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿಯ ಪಕ್ಕ ನಿರ್ಮಾಣವಾಗಿರುವ ಖಾಸಗಿ ಮಾರುಕಟ್ಟೆಗೆ ನಿರ್ಮಾಣಕ್ಕೆ ಅನುಮತಿ ನೀಡಬೇಡಿ ಎಂದು ಸರಕಾರಕ್ಕೆ ಪತ್ರ ಬರೆದಿದ್ದ ಬೆಳಗಾವಿ ನಗರದ ಬಿಜೆಪಿ ನಾಯಕರು ಮತ್ತೆ ಖಾಸಗಿ ಮಾರುಕಟ್ಟೆಯವರೊಂದಿಗೆ ಕೈ ಜೋಡಿಸಿ ಸರಕಾರದ ಎಪಿಎಂಸಿಗೆ ಅನ್ಯಾಯ ಮಾಡಿರುವ ಕುರಿತು ಧ್ವನಿ ಎತ್ತಲಿ ಶೆಟ್ಟರ್ ಎಂದು ಟೋಪಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!