23/12/2024
IMG-20240711-WA0006

ಬೆಳಗಾವಿ-11: ಪ್ರಕೃತಿಯಲ್ಲಿ ಮರ ಗೀಡಗಳು ಜಾತಿಯ ಎಂದು ಬಡೇದಾಡುವುದಿಲ್ಲ. ಆದರೆ ಮನುಷ್ಯರು ಪ್ರಕೃತಿಯಲ್ಲಿ ಜಾತಿ ಜಾತಿ ಎಂದು ಬಡಾದಾಡುವುದು ಒಂದೇ ಇದೊಂದೇ ಮನುಷ್ಯ ಜಾತಿ. ಈವ ಪ್ರಕೃತಿ ವಿರುದ್ಧ ಹೋರಾಡುತ್ತಿರುವ , ವ್ಯವಸ್ಥೆ ವಿರುದ್ಧ ಹೋರಾಟಕ ನಡೆಸುವುದೇ ಧೈರ್ಯ ಎಂದು ಸಂದೇಶ ಸಾರುವ ಏಕೈಕ ಚಿತ್ರ ಧೈರ್ಯಮ್ ಸರ್ವತ್ರ ಸಾಧನಮ್ (ಡಿಎಸ್ಎಸ್) ಕನ್ನಡ ಚಿತ್ರ ಎಂದು ಚಿತ್ರ ನಿರ್ದೇಶಕ ಎ.ಆರ್. ಸಾಯಿರಾಮ್ ಹೇಳಿದರು.

ಗುರುವಾರ ನಗರದಲ್ಲಿ ಕರೆಯಲಾದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಪ್ರಕೃತಿಯಲ್ಲಿ ನಾನಾ ರೀತಿಯ ಪ್ರಾಣಿಗಳು, ಪಕ್ಷಿಗಳು, ಮರ, ಗೀಡಗಳಿವೆ. ಅವು ಯಾವವು ಜಾತಿಯ ವಿರುದ್ಧ ಹೋರಾಟ ಮಾಡುವುದಿಲ್ಲ. ಆದರೆ ಮನುಷ್ಯ ಜಾತಿ ಪ್ರಕೃತಿಯ ವಿರುದ್ಧ ನಡೆದುಕೊಳ್ಳುತ್ತಾನೇ ಎಂದರು.

ಕಳೆದ 1964ರಲ್ಲಿ ತುಮಕೂರು ಪ್ರಾಂತದಲ್ಲಿ ನಡೆದ ನೈಜ ಘಟನೆ ಧೈರ್ಯಮ್ ಸರ್ವತ್ರ ಸಾಧನಮ್ ಚಿತ್ರವಾಗಿದೆ. ಮನುಷ್ಯ ತನ್ನ ಮನುಷ್ಯತ್ವವನ್ನು ಬಿಟ್ಟು ದೌರ್ಜನ್ಯದ ಅತಿರೇಕಕ್ಕೆ‌ ಹೋದಾಗ ಯಾವರೀತಿ ಇರುತ್ತದೆ ಎಂಬುದಕ್ಕ ಈ ಚಲನಚಿತ್ರ ಸಾಕ್ಷಿಯಾಗಿದೆ. ತನ್ನ ಅಸ್ತಿತ್ವ ಮರು ಸ್ಥಾಪನೆ ಮಾಡಲು ದೈರ್ಯ ಬೇಕು. ಇದುವೇ ಧೈರ್ಯಮ್ ಸರ್ವತ್ರ ಸಾಧನಮ್ ಎಂದರು.
ತಂದೆ, ಮಗನ ನಡುವಿನ ಬಾಂಧವ್ಯವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಆದರೆ ನಮ್ಮ ಸಿನಿಮಾಗಳಿಗೆ ಸೂಕ್ತ ಚಿತ್ರಮಂದಿರಗಳು ದೊರೆಯುತ್ತಿಲ್ಲ. ಈ ಸಿನಿಮಾವನ್ನು ಓಟಿಟಿ ಪ್ಲಾಟ್ ಫಾಮ್೯ನಲ್ಲಿ ತರುವ ಚಿಂತನೆಯೂ ನಡೆಯುತ್ತಿದೆ‌.ಯೂಟ್ಯೂಬ್ ನಲ್ಲಿ ಚಿತ್ರದ ಕೆಲ ತುಣುಕುಗಳನ್ನು ಬಿಡಲಾಗಿದೆ. ಕಡುರನಾಡಿನ ನೆಲದ ಮಹತ್ವದ ಕುರಿತು ಚಿತ್ರದಲ್ಲಿ ಸಾರಲಾಗಿದೆ ಎಂದರು.

ಧೈರ್ಯಮ್ ಸರ್ವತ್ರ ಸಾಧನಮ್ ಚಿತ್ರ ಈಗಾಗಲೇ ಬಿಡುಗಡೆಯಾಗಿದೆ. ಆದರೆ ರಾಜ್ಯದಲ್ಲಿ ಥೆಟರ್ ಮಾಫಿಯಾ ಬಹಳ ಇದೆ. ಕರ್ನಾಟಕ ಚಲನಚಿತ್ರ ಮಂಡಳಿ ಹೊಸ ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದರೇ ಚಿತ್ರ ಪ್ರಸಾರಕ್ಕೆ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಕೋಟ್ಯಂತರ ರೂ. ಬಂಡವಾಳ ಹೂಡಿ ಸಿನಿಮಾ ಮಾಡಿದರೂ ಸೂಕ್ತ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಂ.ಗೋಪಿನಾಥ್, ಪ್ರೊ.ಶಿವರುದ್ರ ಕಲ್ಲೋಳ್ಳಿ, ಜೀವನಲತಾ ನಡುವಿನಮನಿ ಉಪಸ್ಥಿತಿರಿದ್ದರು.

error: Content is protected !!