ಬೆಳಗಾವಿ-11: ವಿದ್ಯಾಭ್ಯಾಸದಿಂದ ಜೀವನ ಸಾಗಿಸಲು ವೃತ್ತಿ ದೊರತರೆ, ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತೆ. ಆದ್ದರಿಂದ ವಿದ್ಯರ‍್ಥಿಗಳು ಅಭ್ಯಾಸ ಮತ್ತು ಹವ್ಯಾಸ ಈ ಎರಡು ಸಂಗತಿಗಳ ಕಲಿಕೆಗೆ ಮಹತ್ವ ನೀಡಬೇಕು ಎಂದು ಸಾಹಿತಿ ಮತ್ತು ಬರಹಗಾರ ಎಚ್. ಡುಂಡಿರಾಜ್ ಹೇಳಿದರು.
ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಗುರುವಾರ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ೨೦೨೪ನೇ ಸಾಲೀನ ಪಿ.ಜಿ ಜಿಮಖಾನ್ ವಿದ್ಯರ‍್ಥಿ ಒಕ್ಕೂಟ ಸಾಂಸ್ಕೃತಿಕ ಮತ್ತು ಕ್ರೀಡಾಕೂಟಗಳ ಉದ್ಘಾಟನೆ ಕರ‍್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾಭ್ಯಾಸದಿಂದ ದೊರೆತ ವೃತ್ತಿಗೆ ನಿವೃತ್ತಿಯಿದೆ. ಆದರೆ ಹವ್ಯಾಸದಿಂದ ರೂಢಿಸಿಕೊಂಡ ಪ್ರವೃತ್ತಿಯು ಜೀವನದ ಕೊನೆವರೆಗೂ ನಮ್ಮ ಜೊತೆಯಿರುತ್ತದೆ. ನಾನು ಪಡೆದ ಪದವಿ ಮತ್ತು ಮಾಡಿದ ವೃತ್ತಿಗಿಂತ ನನ್ನ ಲೇಖನ, ಬರಹ ಮತ್ತು ಕವಿತೆ, ಚುಟುಕುಗಳೆ ನನ್ನನ್ನು ಹೆಚ್ಚು ಪ್ರಖ್ಯಾತಿಗೊಳಿಸಿದ್ದಾವೆ. ಆದ್ದರಿಂದ ಪಠ್ಯೇತರ ಚಟುವಟಿಕೆಗಳು ಹವ್ಯಾಸಗಳ ವೃದ್ಧಿಗೆ ಕಾರಣವಾಗುವುದರ ಜೊತೆಗೆ ಬದುಕಿಗೆ ಪರಿಪರ‍್ಣ ರ‍್ಥ ನೀಡುತ್ತವೆ ಎಂದರು.
ವಿದ್ಯರ‍್ಥಿಗಳು ಸಾಧನೆ ಮತ್ತು ಗುರಿಯನ್ನು ನಾಳೆ ಎಂದು ಮುಂದೂಡಬಾರದು. ಸದ್ಯ ದೊರೆತ ಅವಕಾಶ ಮತ್ತು ಸಮಯದ ಸದ್ವಿನಿಯೋಗ ಮಾಡಿಕೊಂಡು ತ್ವರಿತವಾಗಿ ಉತ್ತಮ ನರ‍್ಧಾರಗಳನ್ನು ತೆಗೆದುಕೊಂಡು ಉಜ್ವಲ ಭವಿಷ್ಯಕ್ಕೆ ಸದಾ ಶ್ರಮಿಸಬೇಕು ಎಂದರು.
೨೦೨೩ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಷ್ಟç ಮಟ್ಟದಲ್ಲಿ ೧೦೦ನೇ ರ‍್ಯಾಂಕ್ ಪಡೆದ ವಿಜೇತಾ ಹೊಸಮನಿ ಮಾತನಾಡಿ, ಎಲ್ಲರೂ ಬಾಲ್ಯದಲ್ಲಿಯೆ ಗುರಿಯನ್ನು ನಿಶ್ಚಯಿಸಬೇಕು. ಆಗ ಮಾತ್ರ ಆ ಗುರಿಯ ಸಾಧಿಸಲು ಬೇಕಾದ ಸಿದ್ಧತೆ ಮತ್ತು ತಯಾರಿ ಬಹಳಷ್ಟು ಸಮಯ ದೊರೆಯುವುದು. ಪ್ರತಿಯೊಂದು ಸಾಧನೆ ಪ್ರತಿಯೊಬ್ಬರಿಂದಲೂ ಸಾಧ್ಯ. ವಿದ್ಯರ‍್ಥಿಗಳು ತಮ್ಮ ಬಗ್ಗೆ ಮನೆಮಾಡಿರುವ ಕೀಳರಿಮೆಯನ್ನು ತೊರೆದು ಆತ್ಮವಿಶ್ವಾಸ ಮುನ್ನುಗ್ಗುವ ಧರ‍್ಯ ಹೊಂದಿರಬೇಕು. ಉತ್ತಮ ಮರ‍್ಗರ‍್ಶನ, ಶಿಸ್ತು, ಸತತ ಪರಿಶ್ರಮ ಮತ್ತು ಯೋಜಿತ ಸಿದ್ಧತೆ ಈ ಸಂಗತಿಗಳೆ ಗೆಲುವು ನೀಡುವ ಅಸ್ತçಗಳಾಗಿವೆ ಎಂದರು.
ಉದ್ಯೋಗ ಮೇಳ ಆಯೋಜನೆ:
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಸಿ.ಎಂ.ತ್ಯಾಗರಾಜ ಮಾತನಾಡಿ, ಬಡತನ ಮತ್ತು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಸಮಾಜದಲ್ಲಿನ ಗ್ರಾಮೀಣ ಪ್ರದೇಶದ ಯುವಕರಿಗೆ ಮತ್ತು ವಿದ್ಯರ‍್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಮುಂಬರವ ದಿನಗಳಲ್ಲಿ ಬೃಹತ್ ಉದ್ಯೋಗ ಮೇಳ ಮತ್ತು ಕೌಶಲಗಳ ತರಬೇತಿ ಆಯೋಜನೆಗೆ ಆರ್‌ಸಿಯು ಯೋಜನೆ ರೂಪಿಸಿದೆ. ಕೇವಲ ಶಿಕ್ಷಣ ನೀಡುವುದು ಮಾತ್ರವಲ್ಲ, ಯುವಕರಿಗೆ ಉದ್ಯೋಗ ದೊರೆಯುವ ನಿಟ್ಟಿನಲ್ಲಿ ಆರ್‌ಸಿಯು ಶ್ರಮಿಸುತ್ತಿದೆ ಎಂದರು.
ಕುಲಸಚಿವೆ ರಾಜಶ್ರೀ ಜೈನಾಪುರ ಮತ್ತು ಹಣಕಾಸು ಅಧಿಕಾರಿ ಎಂ.ಎ. ಸಪ್ನ ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಪ್ರೊ. ರವೀಂದ್ರನಾಥ ಕದಮ್, ವಿವಿಯ ವಿವಿಧ ನಿಖಾಯದ ಡೀನರು, ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯರ‍್ಥಿ ಒಕ್ಕೂಟದ ಸದಸ್ಯರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯರ‍್ಥಿಗಳು ಹಾಜರಿದ್ದರು.
ಪಿ.ಜಿ. ಜಿಮಖಾನಾ ನರ‍್ದೇಶಕಿ ಪ್ರೊ. ಮನೀಷಾ ನೇಸರಕರ ಪಿ.ಜಿ. ಜಿಮ್‌ಖಾನಾದ ವರ‍್ಷಿಕ ವರದಿ ವಾಚಿಸಿದರು. ಪಿ.ಜಿ. ಜಿಮಖಾನಾ ಕ್ರೀಡಾ ವಿಭಾಗದ ಸಂಯೋಜಕ ಡಾ. ಚಂದ್ರಶೇಖರ ಎಸ್.ವಿ ಸ್ವಾಗತಿಸಿದರು. ಪಿ.ಜಿ. ಜಿಮಖಾನಾ ಸಾಂಸ್ಕೃತಿಕ ವಿಭಾಗದ ಸಂಯೋಜಕ ಡಾ.ಮಂಜುನಾಥ. ಎನ್.ಕೆ ಪರಿಚಯಿಸಿದರು. ರ‍್ಜಾನಾ ಸಿಪಾಯಿ ವಂದಿಸಿದರು.
ಚುಟುಕುಗಳ ಜುಗಲ್‌ಬಂದಿ:
ಚುಟುಕು ಮತ್ತು ಸಣ್ಣ ಕವಿತೆಗಳಿಂದೆ ಸಾಹಿತ್ಯ ರಸಿಕರನ್ನು ರಂಜಿಸುವ ಸಾಹಿತಿ ಎಚ್. ಡುಂಡಿರಾಜರು ತಮ್ಮ ಭಾಷಣದಲ್ಲಿ ಐದಾರು ಬಾಲ್ಯ, ತಾರುಣ್ಯ, ಪ್ರೇಮ, ವೃತ್ತಿ ಈ ಸಂಗತಿಗಳ ಕುರಿತಾಗಿ ಕವಿತೆ ವಾಚಿಸಿ ವಿದ್ಯರ‍್ಥಿಗಳ ಮನಗಳನ್ನು ಸೆಳೆದರೆ, ಕುಲಪತಿ ಪ್ರೊ. ಸಿ.ಎಂ ತ್ಯಾಗರಾಜ ಅವರು ಡುಂಡಿರಾಜರು ರಚಿಸಿದ ಆಯ್ದ ಕೆಲ ಕವಿತೆಗಳನ್ನು ವಾಚಿಸುವ ಮೂಲಕ ಸಭೆಗೆ ನವ ಕಳೆಯನ್ನು ನೀಡಿದರು. ಈ ಇಬ್ಬರ ಕವಿತೆ ವಾಚನದ ಜುಗಲಬಂದಿಯೂ ವಿದ್ಯರ‍್ಥಿಗಳಲ್ಲಿ ಸಾಹಿತ್ಯದ ಬಗ್ಗೆ ನವ ಉತ್ಸಾಹದ ಹೊಮ್ಮಿಸಿತು ಎಂದರೆ ತಪ್ಪಾಗದು.