23/12/2024
IMG-20240710-WA0011

ಬೆಳಗಾವಿ-10: ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ವಿಪುಲ ಅವಕಾಶಗಳಿದ್ದು, ಈ ಅವಕಾಶಗಳ ಸದ್ಬಳಕೆ ಮಾಡಿಕೊಂಡು ತಾವು ನಿರ್ಧರಿಸಿದ್ದ ನಿರ್ಧಿಷ್ಠ ಗುರಿ ತಲುಪಲು ಕಠಿಣ ಪರಿಶ್ರಮ ವಹಿಸುವುದು ಅವಶ್ಯಕವಾಗಿದೆ ಎಂದು ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಿಕ ಅವರು ಅಭಿಪ್ರಾಯಪಟ್ಟರು.
ರವಿವಾರದಂದು ಬೆಳಿಗ್ಗೆ ನಗರದ ಮಿಲೇನಿಯಂ ಗಾರ್ಡನದಲ್ಲಿ ಜೈನ ಇಂಟರ್‌ನ್ಯಾಷನಲ್ ಟ್ರೆಡ ಆರ್ಗನೈಝೇಶನ ಜಿತೋ ಸಂಸ್ಥೆಯ ವತಿಯಿಂದ ಜೈನ ಸಮಾಜದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಿತೋ ಶ್ಯಾಂಕಿ ಯೋಜನೆಯಡಿ ನೀಡಲಾಗುವ ಶಿಷ್ಯವೇತನವನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಹಾಗೂ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸ ಮಾಡಲು ವಿಪುಲ ಅವಕಾಶಗಳು ಇಂದು ಲಭ್ಯವಿವೆ. ಭಾರತೀಯ ಸೇನೆ ಸೇರಬೇಕಾದರೆ ಯಾವ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ತಿಳಿದುಕೊಂಡು ಸೇನಾಧಿಕಾರಿಗಳಾಗಬಹುದು. ಸರಕಾರ ಸೇವೆ, ಶಿಕ್ಷಣ ಸೇವೆ, ಬ್ಯಾಂಕಿAಗ ಸೇವೆ ಸೇರಿದಂತೆ ಇನ್ನಿತರ ವಿಭಾಗದಲ್ಲಿ ಅನೇಕ ಅವಕಾಶಗಳಿವೆ. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ನಂತರದ ಶಿಕ್ಷಣ ಪಡೆಯುವಾಗ ಜೀವನದಲ್ಲಿ ಒಂದು ನಿರ್ಧಿಷ್ಠವಾದ ಗುರಿಯನ್ನು ಹೊಂದಿರಬೇಕು. ಮತ್ತು ಆ ಗುರಿಯನ್ನು ತಲುಪಲು ಕಠಿಣ ಪರಿಶ್ರಮ ವಹಿಸಬೇಕೆಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಆಗಮಿಸಿದ ಮಾಣಿಕಬಾಗ ಆಟೋಮೊಬೈಲ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭೂಷಣ ಮಿರ್ಜಿ ಅವರು ಮಾತನಾಡಿ , ಇಂದು ಜಿತೋ ಸಂಸ್ಥೆಯು ನೀಡುತ್ತಿರುವ ವಿದ್ಯಾರ್ಥಿವೇತನವನ್ನು ಪಡೆದುಕೊಂಡು ಉನ್ನತ ಶೀಕ್ಷಣ ಪಡೆದು ಉತ್ತಮ ನಾಗರಿಕರಾಗಬೇಕೆಂದು ಅವರು ಹೇಳಿದರು.
ಇನ್ನೋರ್ವ ಗೌರವ ಅತಿಥಿ ಶಾಂತಿ ಫೋಮ್ಯಾಕ ಸಂಸ್ಥೆಯ ಉಪಾಧ್ಯಕ್ಷ ಶಾಂತಿಲಾಲಜಿ ಪೋರವಾಲ ಅವರು ಮಾತನಾಡಿ , ಕಳೆದ 10 ವರ್ಷಗಳಿಂದ ಶ್ಯಾಂಕಿ ಯೋಜನೆಯಡಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಮೊದಲು ಕೇವಲ 20 ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲಾಗುತ್ತಿತ್ತು. ಇಂದು ಹಲವಾರು ದಾಣಿಗಳ ನೆರವಿನಿಂದ ಇಂದು 118 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಸಮಾಜದ ಕೆಳ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕೆಂದು ಅವರು ಹೇಳಿದರು.
ಸಮಾರಂಭದಲ್ಲಿ ಪುಷ್ಪಾ ಪೋರವಾಲ ಅವರು ಶ್ಯಾಂಕಿ ಯೋಜನೆಗೆ ರೂ. 5 ಲಕ್ಷ ಹಾಗೂ ಮನೋಜ ಸಂಚೇತಿ ರೂ. 1 ಲಕ್ಷ ಕೊಡುಗೆಯಾಗಿ ನೀಡಿದರು. ಇಂದು ನಡೆದ ಸಮಾರಂಭದಲ್ಲಿ ತಲಾ 5 ಸಾವಿರ ರೂ.ಗಳಂತೆ ಒಟ್ಟು 118 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಮಾರಂಭದಲ್ಲಿ ಜಿತೋ ಅಧ್ಯಕ್ಷ ವೀರಧವನ ಉಪಾಧ್ಯೆ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಡಾ. ದೇವೆಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂತಿನಾಥ ಕಲಮನಿ ಜಿತೋ ಸಂಸ್ಥೆಯ ಯೋಜನೆಯಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ರಾಜೇಶ ಭೊಸಗಿ ಹಾಗೂ ಕಾರ್ಯದರ್ಶಿ ಅಶೋಕ ಕಟಾರಿಯಾ ಅತಿಥಿಗಳನ್ನು ಪರಿಚಯಿಸಿ ಕೊನೆಯಲ್ಲಿ ವಂದಿಸಿದರು. ಪ್ರಾಪ್ತಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಜಿತೋ ಪದಾಧಿಕಾರಿಗಳು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

error: Content is protected !!