23/12/2024
IMG-20240709-WA0044

ಬೈಲಹೊಂಗಲ-09:ಉತ್ತಮ ಆರೋಗ್ಯ ಬಯಸುವ ಪ್ರತಿಯೊಬ್ಬರು ಸಸ್ಯ ಸಂಕುಲವನ್ನು ಬೆಳೆಸಬೇಕೆಂದು ಬಿಜೆಪಿ ಮಂಡಲ ಅಧ್ಯಕ್ಷ ಗುರುಪಾದ ಕಳ್ಳಿ ಹೇಳಿದರು.
ಸಮೀಪದ ಹೊಸೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಧಾನಿ ಮೋದಿಯವರು ಹೇಳಿದ “ಏಕ ಪೇಡ ಮಾ ಕೆ ನಾಮ” ಅಡಿಯಲ್ಲಿ ಸಸಿ‌ನೆಟ್ಟು ಮಾತನಾಡಿ, ಒಳ್ಳೆಯ ವಾತಾವರಣಕ್ಕಾಗಿ ಪ್ರತಿಯೊಬ್ಬರು ಕನಿಷ್ಠ ಒಂದು ಸಸಿ ನೆಟ್ಟು ಅದರ ಪಾಲನೆ ಪೊಷಣೆ ಮಾಡಿದಾಗ ಪರಿಸರ ಸ್ವಚ್ಚಂದವಾಗಿರುತ್ತದೆ. ಸಸಿಗಳ ಸಂಖ್ಯೆ ಹೆಚ್ಚುವದರಿಂದ ವಾತಾವರಣದಲ್ಲಿ ಬಿಸಲಿನ ತಾಪ ಕಡಿಮೆಯಾಗಿ ಮಳೆಯ ಪ್ರಮಾಣ ಹೆಚ್ಷಲಿದೆ ಬರುವ ದಿನಗಳಲ್ಲಿ ನೀರಿನ ಬರ ತಪ್ಪಲಿದೆ. ಪ್ರತಿಯೊಂದು ಜೀವಿಗಳಿಗೆ ಶುದ್ದ ಆಮ್ಲಜನಕ ದೊರೆಯಲಿದೆ ಈ ಎಲ್ಲ ಉದ್ದೇಶದಿಂದ ಪ್ರಧಾನ ಮಂತ್ರಿಗಳು ಪ್ರತಿಯೊಬ್ಬರಿಗೂ ಅತ್ಯಂತ ಅಮೂಲ್ಯ ಜೀವ ಎಂದರೆ ತಾಯಿ ಆದ್ದರಿಂದ ತಮ್ಮ ತಾಯಿಯ ಹೆಸರಿನ‌ ಮೇಲೆ ಒಂದೊದು ಸಸಿ ನೆಡಲು ಕರೆ ನೀಡಿದ್ದು ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ತಾಯಿಯ ಹೆಸರಿನಿಂದ ತಮ್ಮ ಮನೆ, ಜಮೀನು, ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ, ಜಿಲ್ಲಾ ಬಿಜೆಪಿ ರೈತ ಮೊರ್ಚಾ ಅಧ್ಯಕ್ಷ ಜಗದೀಶ್ ಬೂದಿಹಾಳ, ಜಿಲ್ಲಾ ಯುವ ಮೊರ್ಚಾ ಉಪಾಧ್ಯಕ್ಷ ಗೌಡಪ್ಪ ಹೊಸಮನಿ, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ ಕರಡಿಗುದ್ದಿ, ಮೂಶೆಪ್ಪ ಜಡಿ, ಮಡಿವಾಳಪ್ಪ ಕಮತಗಿ, ಮೋಹನ ವಕ್ಕುಂದ, ಬಸವರಾಜ ದುಗ್ಗಾಣಿ, ಅಜ್ಜಪ್ಪ ಸಂಗೋಳ್ಳಿ, ಸೋಮಲಿಂಗ ಮುಲಿಮನಿ, ಬಸವಾಣೆಪ್ಪ ಸಂಗೋಳ್ಳಿ , ನಿಂಗಪ್ಪ‌ ಬುಡಶೆಟ್ಟಿ, ಈರಪ್ಪ ಬಾಳೆಕುಂದರಗಿ, ಮಲ್ಲಿಕಾರ್ಜುನ ಇಂಗಳಗಿ, ಬಸವಾಣೆಪ್ಪ ಚಿಕ್ಕೊಪ್ಪ, ಸುಭಾಷ ತಳವಾರ, ಮಹೇಶ ಬೋಳೆತ್ತಿನ, ಶಿವಪ್ಪ ಸಂಗೋಳ್ಳಿ, ದಾದಾಪೀರ ಜಮಾದಾರ, ಸಂಜು ಜುಮೆತ್ರಿ, ಪುಂಡಲಿಕ ಇಂಗಳಗಿ, ಮಡಿವಾಳಪ್ಪ ಚಿಕ್ಕೊಪ್ಪ ಸೇರಿದಂತೆ ಅನೇಕರು ಉಪಸ್ಥಿತಿರಿದ್ದರು.

error: Content is protected !!