ಬೆಳಗಾವಿ-08 : ಹಲವು ದಶಕಗಳಿಂದ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮೂರು ರಾಜ್ಯಗಳ ನಡುವಿನ ಮಹದಾಯಿ ಜಲ ವಿವಾದ ಬಗೆಹರಿಯುವ ಲಕ್ಷಣ ಅಂತು ಸದ್ಯಕ್ಕೆ ಅಂತು ಕಾಣುತ್ತಿಲ್ಲ. ಮಹದಾಯಿ ಯೋಜನೆಗೆ ಗೋವಾ ಸರ್ಕಾರ ಮತ್ತೆ ಕ್ಯಾತೆ ತೆಗೆದಿದೆ. ಗೋವಾ ಸರ್ಕಾರದ ಒತ್ತಡಕ್ಕೆ ಮಣಿದು ಕೇಂದ್ರ ತಂಡ ರಚಿಸಲಾಗಿದ್ದು, ಭಾನುವಾರ ಕೇಂದ್ರ ತಂಡ ಬೆಳಗಾವಿಯ ಕಣಕಂಬಿಗೆ ಭೇಟಿ ನೀಡಿದರು.
ಕೇಂದ್ರದಿಂದ ಪರಿಸರ ಇಲಾಖಗೆ ಅನುಮತಿ ಸಿಗದಂತೆ ನೋಡಿಕೊಲ್ಳಲು ಗೋವಾ ಸರ್ಕಾರ ಕುತಂತ್ರ ಮಾಡಿದೆ ಎನ್ನಲಾಗಿದೆ. ಇದರ ಭಾಗವಾಗಿಯೇ ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರದ ಪ್ರವಾಹ ತಂಡ ಭೇಟಿ ನೀಡಿದರು. ಕರ್ನಾಟಕ, ಮಹಾರಾಷ್ಟ್ರ, ಗೋವಾ ಮೂರು ರಾಜ್ಯಗಳ ಅಧಿಕಾರಿಗಳನ್ನು ಒಳಗೊಂಡ ಸದಸ್ಯರ ತಂಡ ಬೆಳಗವೈ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕಂಬಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳಸಾ ಮತ್ತು ಬುಂಡೂರಿ ನಾಲೆ ಉಗಮ ಸ್ಥಾನಕ್ಕೆ ಭೇಟಿ ನೀಡಿ ಎರಡು ನಾಲೆಗಳ್ ನೀರಿನ ಹರಿವು ಹಾಗೂ ಮಹದಾಯಿ ಯೋಜನೆ ಕಾಮಗಾರಿ ಪರಿಶೀಲನೆ ನಡೆಸಿ ಆದಷ್ಟು ಬೇಗನೆ ಮಹಾದಾಯಿ ಸಮಸ್ಯೆಯನ್ನು ಬಗೆ ಹರಿಸುವುದಾಗಿ ತಿಳಿಸಿದೆ.