ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀ ಜಗದೀಶ ಶೆಟ್ಟರ ಅವರು ಕೇಂದ್ರ ರಸ್ತೆ ಸಾರಿಗೆ ಹಾಗು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರನ್ನು ದೆಹಲಿ ಅವರ ಕಛೇರಿಯಲ್ಲಿ ಭೇಟಿ ಮಾಡಿ ಸಮಗ್ರ ಬೆಳಗಾವಿಯ ರಸ್ತೆ ಅಭಿವೃದ್ಧಿಗಳ ಕುರಿತು ಮನವಿ ಸಲ್ಲಿಸಿದರು.
1) ಬೆಳಗಾವಿ ತಾಲೂಕಿನ ಜಡಶಾಹಪೂರ- ಹೊನಗಾ ನಡುವೆ ನಿರ್ಮಾಣ ಹಂತದಲ್ಲರುವ ಬೈಪಾಸ ರಸ್ತೆ ( ರಿಂಗ ರೋಡ) ನಿರ್ಮಾಣಕ್ಕೆ ಅಗತ್ಯವೆನಿಸಿರುವ ಭೂಸ್ವಾಧೀನ ಕಾರ್ಯವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವ ವ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲು ಮನವಿಯಲ್ಲಿ ತಿಳಿಸಿದರು.
ಅದರಂತೆ ಬೆಳಗಾವಿ(ಶಗಣಮಟ್ಟಿ)-ಹುನಗುಂದ-ರಾಯಚೂರ ನಡುವೆಯೂ ನಿರ್ಮಾಣ ಗೊಳ್ಳುತ್ತಿರುವ ರಸ್ತೆಯ ನಿರ್ಮಾಣಕ್ಕೆ ಅಗತ್ಯವೆನಿಸಿರುವ ಭೂಸ್ವಾಧೀನ ಕಾರ್ಯವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವ ವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ .
2) ಬೆಳಗಾವಿ ನಗರಕ್ಕೆ ಹೊಂದಿ ಕೊಂಡು ರಾಷ್ಟ್ರೀಯ ಹೆದ್ದಾರಿ -4 ಯಿಂದ ಸೇರುವ ಅಪ್ರೋಚ ರಸ್ತೆ ಅಶೋಕ ವೃತ್ ಮಾರ್ಗವಾಗಿ ಕಿತ್ತೂರ ರಾಣಿ ಚನ್ನಮ್ಮ ವೃತ್ತ ವರಗೆ “ಪ್ರೈಓವರ್ ನಿರ್ಮಾಣ ಮತ್ತು ಈ ಕುರಿತು ಕರ್ನಾಟಕ ರಾಜ್ಯ ಸರಕಾರವು ಈಗಾಗಲೆ ಕೇಂದ್ರ ಸರಕಾರಕ್ಕೆ ಸಲ್ಲಿಸಿದ ರೂ: 600 ಕೋಟಿ ಪ್ರಸ್ತಾವನೆಗೆ ಅನುಮೋಧನೆ ನೀಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
3) “ಕೇಂದ್ರ ರಸ್ತೆ ಸುಧರಣೆ ನಿದಿ”ಯೋಜನೆಯಡಿ ಗೋಕಾಕ ಫಾಲ್ಸ ಹತ್ತಿರ ಕೇಬಲ್ ಕಾರ” ನಿರ್ಮಿಸಲು ಕರ್ನಾಟಕ ರಾಜ್ಯ ಸರಕಾರವು ಈಗಾಗಲೆ ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಗೆ ಅನುಮೋಧನೆ ನೀಡುವ ಬಗ್ಗೆ ಕ್ರಮ ಕೈಕೊಳ್ಳುವದು.
4) ಐತಿಹಾಸಿಕ ಕಿತ್ತೂರ ಪಟ್ಟಣ ದಿಂದ ಬೈಲಹೊಂಗಲ ಪಟ್ಟಣ ನಡುವೆ ರಸ್ತೆ ಸುಧಾರಣೆಗೆ ಕರ್ನಾಟಕ ರಾಜ್ಯ ಸರಕಾರವು ಈಗಾಗಲೆ ಕೇಂದ್ರ ಸರಕಾರಕ್ಕೆ ಸಲ್ಲಿಸಿದ ರೂ: 160 ಕೋಟಿ ಪ್ರಸ್ತಾವನೆಗೆ ಅನುಮೋಧನೆ ನೀಡುವ ಬಗ್ಗೆ ಮನವಿ ಸಲ್ಲಿಸಿದರು.
5) ಮೂಡಲಗಿ ತಾಲೂಕಿನ ಸಂಕೇಶವರ ಸಂಗಮ್ ರಾಜ್ಯ ಹೆದ್ದಾರಿ-44 ( ಚೈನೇಜ್ 35.54 ರಿಂದ 81.54 ) 46 ಕಿ ಮಿ ಅಂತರ ರಸ್ತೆ ಅಭಿವೃದ್ಧಿ ಗೊಳಿಸುವದು (ಪ್ಯಾಕೇಜ-1) (Rigid Pavements Two Lanes + Paved Shoulders)
6) ಅದರಂತೆ ನರಸಾಪೂರ-ಹೊಸಕೋಟಿ-ಬುದ್ದಿ-ಯಾದವಾಡ (ಜಿಲ್ಲಾ ಮುಖ್ಯ ರಸ್ತೆ) ಯನ್ನು ಸಿಮೆಂಟ ಫ್ಯಾಕ್ಟರಿ ಸೇರುವ ರಸ್ತೆ ದಿಂದ ಮೂಡಲಗಿ ತಾಲೂಕಿನ ಸಂಕೇಶವರ ಸಂಗಮ್ ರಾಜ್ಯ ಹೆದ್ದಾರಿ-44 ಸೇರುವ ಸುಮಾರು 6 ಕಿ ಮಿ ಅಂತರ ರಸ್ತೆ ಅಭಿವೃದ್ಧಿ ಗೊಳಿಸುವದು (ಪ್ಯಾಕೇಜ್ -2) (Rigid Pavements Two Lanes + Paved Shoulders).
‘ಸಾರ್ವಜನಿಕರ ಹಿತಾ ದೃಷ್ಟಿಯಿಂದ ಮೇಲೆ ಪ್ರಸ್ತಾಪಿತ ಎಲ್ಲ ಕಾಮಗಾರಿಗಳೆಗೆ ಅಗತ್ಯ ಅನಮೋದನೆ ವ ಅನುಧಾನ ನೀಡುವ ಬಗ್ಗೆ ಮತ್ತು ಕಾಮಗಾರಗಳನ್ನು ಕೂಡಲೆ ಕೈಗೆತ್ತಿ ಕೊಳ್ಳುವ ಬಗ್ಗೆ ಅಗತ್ಯ ಕ್ರಮಕ್ಕಾಗಿ ಮಾನ್ಯ ಕೇಂದ್ರ ರಸ್ತೆ ಸಾರಿಗೆ ಹಾಗು ಹೆದ್ದಾರಿ ಸಚಿವರು ಶ್ರೀ ನಿತಿನ ಗಡಕರಿ ಅವರನ್ನು ಬೆಳಗಾವಿ ನೂತನ ಸಂಸದರು ಶ್ರೀ ಜಗದೀಶ ಶೆಟ್ಟರ ಅವರು ಕೋರಿದರು.