23/12/2024

ಬೆಳಗಾವಿ-೦೨:ಬ್ರಾಹ್ಮಣ ಸಮಾಜದ ಬಡ ವಿದ್ಯಾರ್ಥಿಗಳ‌ ವಿದ್ಯಾಭ್ಯಾಸಕ್ಕೆ ಅಭಯ ಹಸ್ತ ಚಾಚುವ
ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಮಹತ್ವದ ತೀರ್ಮಾನ
ತೆಗೆದುಕೊಂಡಿದೆ.
ಸಮಾಜದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಶುಲ್ಕವನ್ನು ಟ್ರಸ್ಟ್ ವತಿಯಿಂದ ನೀಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಇದೇ ದಿ. 3 ರಂದು ಸಂಜೆ 5 ಕ್ಕೆ ಉದ್ಯಮಬಾಗದಲ್ಲಿರುವ
ಫೌಂಡ್ರಿಕ್ಲಸ್ಟರನಲ್ಲಿ ಚೆಕ್ ವಿತರಣಾ ಸಮಾರಂಭ ನಡೆಯಲಿದೆ.
ಬ್ರಾಹ್ಮಣ ಸಮಾಜ ಟ್ರಸ್ಟ ಅಧ್ಯಕ್ಷ ರಾಮ‌ ಭಂಡಾರಿ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ
ನಡೆಯಲಿದೆ. ಉಪಾಧ್ಯಕ್ಷ  ಭರತ ದೇಶಪಾಂಡೆ ಸೇರಿದಂತೆ ಮತ್ತಿತರರು ಉಪಸ್ಥಿತಿ
ಇರಲಿದ್ದಾರೆ.ಆದ್ದರಿಂದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕೆಂದು
ಕಾರ್ಯದರ್ಶಿ ವಿಲಾಸ ಬಾದಾಮಿ ಕೋರಿದ್ದಾರೆ

error: Content is protected !!