ಬೆಳಗಾವಿ-೨೦: ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಮಂಡಲ ವತಿಯಿಂದ ಸುಳಗಾ,ಹಿಂಡಲಗಾ ಚೆಕ್ಪಪೋಸ್ಟ್ ನಾಕದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡಿದ ಕಾಂಗ್ರೆಸ್ ಸರ್ಕಾರದ ಈ ನೀತಿಯನ್ನು ಖಂಡಿಸಿ ರಸ್ತೆ ತಡೆ ಹಾಗೂ ಬೃಹತ್ ಪ್ರತಿಭಟನೆ ಆಯೋಜನೆ ಮಾಡಲಾಗಿತ್ತು. ಮಾಜಿ ಶಾಸಕ ಶ್ರೀ ಮನೋಹರ್ ಕಡೂಲ್ಕರ್, ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಶ್ರೀ ಯುವರಾಜ್ ಜಾದವ್, ಹಿಂಡಲಗಾ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಶ್ರೀ ರಾಮಚಂದ್ರ ಮನೋಳ್ಕರ್ ಕಾಂಗ್ರೆಸ್ ಸರ್ಕಾರವನ್ನು ಈ ನೀತಿಯನ್ನು ವಿರೋಧಿಸಿ ಮಾತನಾಡಿದರು ಹಾಗೂ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಶ್ರೀ ಧನಂಜಯ್ ಜಾದವ್ ಇವರು ಮಾತನಾಡುತ್ತಾ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರೈತರಿಗೆ ಬಿಜೆಪಿ ಸರ್ಕಾರ ಇದ್ದಾಗ 4,000 ಸಹಾಯಧನವನ್ನು ನಿಲ್ಲಿಸಿದೆ, ಹಾಲಿನ ಮೇಲಿನ ದರ , ಎಸ್‌ಸಿ/ಎಸ್‌ಟಿ ಸಮಾಜದ 11000 ಕೋಟಿ ರೂಪಾಯಿಯನ್ನು ಮುಸ್ಲಿಂ ಸಮುದಾಯಕ್ಕೆ 10000 ಕೋಟಿಯನ್ನು ನೀಡಿದ್ದಾರೆ ಮತ್ತು ಬೇರೆ ಬೇರೆ ಅನುದಾನಗಳನ್ನು ಖಟಾ ಖಟಾ ಖಟ್ ನಿಲ್ಲಿಸಿದ್ದಾರೆ . ಹೀಗೆ ಅನೇಕ ಅನುದಾನಗಳನ್ನು ನಿಲ್ಲಿಸಿದ್ದಾರೆ. ಬಸ್ ದರ್, ವಿದ್ಯುತ್ ದರ್ ಮತ್ತು ಈಗ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಏರಿಕೆ ಮಾಡಿ ಶ್ರೀಸಾಮಾನ್ಯರ ಜೆಬಿಗೆ ಕತ್ತರಿ ಹಾಕಿದ್ದಾರೆ. ಇದನ್ನು ಖಂಡಿಸಿ ಪ್ರತಿಭಟನೆಯನ್ನು ಜನಸಾಮಾನ್ಯರಿ ಗೋಸ್ಕರ ಮಾಡುತ್ತಿದ್ದೇವೆಂದು ಹೇಳಿದರು.ಸುಮಾರು 1ಘಂಟೆ ರಸ್ತೆತಡೆ ನಡೆಯಿತು ಇದರಿಂದ ರಸ್ತೆಯ ಎರಡು ಬದಿಯಲ್ಲಿ ವಾಹನಗಳು ಭಾರಿ ಪ್ರಮಾಣದಲ್ಲಿ ನಿಂತಿದ್ದವು. ಈ ಪ್ರತಿಭಟನೆಯಲ್ಲಿ ಪಂಕಜ ಘಾಡಿ, ಪ್ರದೀಪ್ ಪಾಟೀಲ್, ವಿಲಾಸ್ ತಹಸೀಲ್ದಾರ್, ಅಜಿತ್ ಹಲ್ಕರ್ಣಿ,ಪವನ್ ದೇಸಾಯಿ,ಗಣಪತ ದೇಸಾಯಿ ಕಲ್ಲಪ್ಪ ಸೂತರ್, ಯಲ್ಲೇಶ್ ಕೊಲ್ಕರ್, ಗುರುರಾಜ್ ಹಲ್ಗತ್ತಿ,ಯಾತೇಶ್ ಹೆಬ್ಬಾಳ್ಕರ್ ಭಾಗ್ಯಶ್ರೀ ಕೋಕಿತ್ಕರ್, ಲಷ್ಮಿ ಪರಮೇಕರ್,ಉಷಾ ಸೋನೇವಾಡ್ಕರ್, ಸುಮನ್ ರಾಜಗೋಳ್ಕರ್ ಹಾಗೂ ಬಿಜೆಪಿಯ ಕಾರ್ಯಕರ್ತರು, ಮಹಿಳೆಯರು ಸೇರಿದಂತೆ ಅನೇಕರು ಹಾಜರಿದ್ದರು.