23/12/2024
IMG-20240620-WA0006

ಅಕ್ಸಲರೇಟ್ ಇಂಡಿಯಾ ಫೌಂಡೆಶನ್ ಟ್ರಸ್ಟ್ ಹಾಗೂ ಸುಪ್ರಜಿತ್ ಫೌಂಡೇಶನ್ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ನಲ್ಲಿ ಕೊವಿಡ್ ನಿಂದ ಏಕಪೋಷಕ ಮತ್ತು ದೀಪೋಷಕ ರನ್ನು ಕಳೆದುಕೊಂಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಅಗತ್ಯವಿರುವ ಸ್ಕೂಲ್ ಬ್ಯಾಗ್, ನೋಟ್ ಪುಸ್ತಕ, ಜಾಮಿಟ್ರಿ ಬಾಕ್ಸ್, ಪೆನ್ನು ಮತ್ತು ಪೆನ್ಸಿಲ್ ಗಳನ್ನು ಭರತೇಶ್ ಕಾಲೇಜು ಆಫ್ ಕಾಮರ್ಸ್ ಸಭಾಂಗಣದಲ್ಲಿ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಒಂದನೇ ತರಗತಿಯಿಂದ – ಸ್ನಾತಕೋತರ ತರಗತಿಗಳಲ್ಲಿ ಒದುತ್ತಿರುವ ಸುಮಾರು 70 ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಆಕ್ಸಲರೇಟ್ ಇಂಡಿಯಾ ಫೌಂಡೇಶನ್ ಟ್ರಸ್ಟ್ ಮಾರ್ಗದರ್ಶಕರಾದ ಅಶೋಕ್ ನಾಯಕ್ ರವರು ಮಾತನಾಡುತ್ತಾ ನಮ್ಮ ಸಂಸ್ಥೆಯು ಕಳೆದ ಆರು ವರ್ಷಗಳಿಂದ ವಿವಿಧ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಕೋವಿಡ್ ಮಹಾಮಾರಿ ನಂತರ ನಾವು ಮುಖ್ಯವಾಗಿ ಮಕ್ಕಳ ವಿದ್ಯಾಭ್ಯಾಸದ ಮೇಲೆ ಗಮನಹರಿಸಿದ್ದೇವೆ, ಅದರ ಸಲುವಾಗಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಗತ್ಯವಿರುವ ಸಾಮಗ್ರಿಗಳನ್ನು ನೀಡುತ್ತಿದ್ದೇವೆ.
ಜೀವನದಲ್ಲಿ ಉತ್ತಮ ಕೌಶಲ್ಯ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಉನ್ನತ ಮಟ್ಟಕ್ಕೆ ಏರಬಹುದು. ಆದ್ದರಿಂದ ಎಲ್ಲಾ ಮಕ್ಕಳು ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡೆದು ಸಮಾಜದಲ್ಲಿ ಉನ್ನತ ಹುದ್ದೆಯನ್ನು ಪಡೆದುಕೊಳ್ಳಬೇಕೆಂಬುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.

ನಂತರ ಇನ್ನೊಬ್ಬ ಮಾರ್ಗದರ್ಶಕರಾದ ಪ್ರಕಾಶ್ ಹಳಿಯಲ್ ರವರು ಮಾತನಾಡಿ ನಮ್ಮ ಸಂಸ್ಥೆ ನೀಡುವ ಸೌಲತ್ತುಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿ ವಿದ್ಯಾಭ್ಯಾಸದಲ್ಲಿ ಉತ್ತಮ ಅಂಕಗಳನ್ನು ಗಳಿಸಬೇಕು ಎಂದರು.

ನಂತರ ಪ್ರಸಾದ್ ಕೈಲಾಜೆ ರವರು ಮಾತನಾಡುತ್ತಾ ನಮ್ಮ ಸಂಸ್ಥೆಯು ಹಲವು ದಾನಿಗಳಿಂದ ಸ್ವೀಕರಿಸಿದ ಮೊತ್ತದಿಂದ ನಾವು ನಿಮಗೆ ಸಹಾಯ ಮಾಡುತ್ತಿದ್ದೇವೆ ಆದ್ದರಿಂದ ಅದನ್ನು ಎಲ್ಲರೂ ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು.

*10ನೇ ತರಗತಿ, ಪ್ರಥಮ ಪಿಯುಸಿ ದ್ವಿತೀಯ ಪಿಯುಸಿ, ಪದವಿ ತರಗತಿಗಳಲ್ಲಿ ಶೇ.75 ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿದ 12 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.* *( ಶಫಿ ಅಜಿದ ಸಾಹೇಬ್ ಮುಲ್ಲಾ- 93%, ಸಮರ್ಥ್ ರುದ್ರಪ್ಪ ಶಾವಗಿ-92.6%, )*

10ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಪ್ರಸಾದ್ ಕೈಲಾಜೆ ಮತ್ತು ಅಶೋಕ್ ನಾಯಕ್ ಅವರು ಸಮಾಲೋಚನೆ ಸಭೆ ಮಾಡಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆಯಲು ಹೇಗೆ ಮತ್ತು ಯಾವ ರೀತಿ ವಿದ್ಯಾಭ್ಯಾಸ ಮಾಡಬೇಕು ಎಂಬುದನ್ನು ತಿಳಿಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಆಕ್ಸಲರೇಟ್ ಇಂಡಿಯಾ ಫೌಂಡೇಶನ್ ಸಂಸ್ಥೆಯ ಮಾರ್ಗದರ್ಶಕರಾದ ರವಿಶಂಕರ್, ಡಾಕ್ಟರ್ ರವೀಂದ್ರ ಅನಗೋಲ್, ನಾರಾಯಣ ಕೊರಡೆ, ಬಸವರಾಜ್ ಸುಗಂಧಿ ,ಚೇತನ್ ಸಿ. ಎನ್, ಮುಂತಾದವರು ಭಾಗವಹಿಸಿದ್ದರು.

error: Content is protected !!