ಬೆಳಗಾವಿ-೧೨: ನ್ಯಾಯಾಲಯದ ಆವರಣದಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಿದ್ದ ಆರೋಪಿಯನ್ನು ವಕೀಲರೊಬ್ಬರು ಥಳಿಸಿದ ಘಟನೆ ನಡೆದಿದೆ.
ನಿತಿನ್ ಗಡ್ಕರಿ ಮತ್ತು ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣದ ವಿಚಾರಣೆಯಲ್ಲಿರುವ ಆರೋಪಿ ಜಯೇಶ್ ಪೂಜಾರಿ ನ್ಯಾಯಾಲಯದ ಆವರಣದಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು. ಇದರಿಂದ ಕುಪಿತಗೊಂಡ ವಕೀಲರು ಆರೋಪಿಗೆ ಥಳಿಸಿದ್ದಾರೆ. ಬಳಿಕ ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ.