ಮುತ್ನಾಳ ಗ್ರಾಮದ ಹಿರೇಮಠದ ಕಿರಿಯ ಗುರುಗಳಾಗಿದ್ದ ಶ್ರೀ ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮುತ್ನಾಳದಲ್ಲಿ ಶುಕ್ರವಾರ ನಡೆದ ಪುಣ್ಯಾರಾಧನೆಯ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಭಾಗವಹಿಸಿ, ಲಿಂಗೈಕ್ಯರಾದ ಶ್ರೀಗಳ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿದರು. ಜೊತೆಗೆ, ಕಿರಿಯ ಗುರುಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.