23/12/2024
IMG-20240530-WA0002

ಮಹರ್ಷಿ ವಾಲ್ಮೀಕಿ ಅಬಿವೃದ್ಧಿ ನಿಗಮ ಇರುವುದು ಬಡವರ ಕಲ್ಯಾಣಕ್ಕೆ ವಾಲ್ಮೀಕಿ ನಾಯಕ ಸಮುದಾಯದ ಜನರ ಅಭಿವೃದ್ಧಿಗೆ. ಆದರೆ ಈ ನಿಗಮದಲ್ಲಿ ಬಡವರ ಕಲ್ಯಾಣಕ್ಕೆ ಸಿಗುವ ನೂರಾರು ಕೋಟಿ ಅನುದಾನದ ಹಣವನ್ನು ಬ್ರಷ್ಟ ಅಧಿಕಾರಿಗಳು ಭ್ರಷ್ಟ ಕೆಲವು ರಾಜಕಾರಣಿಗಳ ಜೊತೆ ಸೇರಿ ಹಣವನ್ನು ಲೂಟಿ ಹೊಡೆದು ವಾಲ್ಮೀಕಿ ನಾಯಕ ಸಮುದಾಯದ ಜನರಿಗೆ ಅನ್ಯಾಯ ಮಾಡುತ್ತಿರುವುದು ನಾಚಿಕೆಗೇಡಿನ ಕೆಲಸ. ಇದು ಖಂಡನೀಯ . ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ಚಂದ್ರಶೇಖರ್ ರವರಿಗೆ ಎಲ್ಲ ಮಾಹಿತಿ ಗೊತ್ತಿದ್ದರೂ ಮೌನವಾಗಿ ಉಳಿದು ಕೊನೆಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ಹೇಡಿತನದ ಕೆಲಸ ಮಾಡಿದ್ದಾರೆ. ಒಂದು ರೀತಿಯಲ್ಲಿ ಇವರದ್ದು ಕೂಡ ತಪ್ಪು ಇದೆ.

IMG 20240530 WA0005 -

ಹಾಗೆಯೆ ಇವರಿಗೆ ಭ್ರಷ್ಟಾಚಾರದಲ್ಲಿ ಸಿಲುಕಿಸಿ ಇವರ ಸಾವಿಗೆ ಕಾರಣರಾದ ಅಧಿಕಾರಿಗಳು ರಾಜಕಾರಣಿಗಳ ಮೇಲೆಯೂ ಕ್ರಮ ಜರುಗಿಸಬೇಕು . ಈ ಒಂದು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಯಾರೆ ದೊಡ್ಡ ರಾಜಕಾರಣಿ ಬಾಗಿ ಆಗಿರಲಿ ಅವರ ಮೇಲೆ ಕಾನೂನು ಕ್ರಮ ಕೈಗೊಂಡು ತಪ್ಪು ಸಾಬೀತಾದಲ್ಲಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸಿ ಕಾನೂನು ಕಠಿಣ ಶಿಕ್ಷೆ ವಿಧಿಸಲಿ. ಹಾಗೂ ಪಕ್ಷದ ಮುಖ್ಯ ಮುಖಂಡರು ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಿ . ಯಾವುದೆ ಸರ್ಕಾರ ಇರಲಿ ವಾಲ್ಮೀಕಿ ನಾಯಕ ಸಮುದಾಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಅನ್ಯಾಯ ಮೋಸ ಮಲತಾಯಿ ಧೋರಣೆ ಮಾಡುತ್ತಾ ಬರುತ್ತಿವೆ. ಇವೆಲ್ಲವನ್ನೂ ಸಮುದಾಯದ ಜನ ಕೂಡ ನೋಡುತಿದ್ದಾರೆ ತಿಳಿದುಕೊಂಡಿದ್ದಾರೆ . ಇದು ಸಮುದಾಯದ ಜನರ ಮೌನವಲ್ಲ ತಾಳ್ಮೆ ಅಷ್ಟೆ ಸಮುದಾಯದ ಇತಿಹಾಸವೇ ಹಾಗೆ ಇದೆ. ಇದುವರೆಗೂ ನಾಯಕ ಸಮುದಾಯದ ಎದುರು ಯಾವ ಒಬ್ಬ ಬೇರೆ ದೇಶದ ರಾಜ್ಯದ ಮಹಾರಾಜರಿಗೂ ಗೆಲ್ಲಲು ಆಗಿಲ್ಲ. ಅಷ್ಟು ಶಕ್ತಿಯುತ ವೀರರು ಶೂರರು ನಮ್ಮವರು ಇತಿಹಾಸವಿದೇ .ಅದನ್ನು ತಿಳಿದುಕೊಂಡು ಸರ್ಕಾರ ವಾಲ್ಮೀಕಿ ನಾಯಕ ಸಮುದಾಯಕ್ಕೆ ಮಲತಾಯಿ ಧೋರಣೆ ತೋರುವುದನ್ನು ಬಿಟ್ಟು ಸರಿಯಾಗಿ ನಡೆಯಲಿ. ಇಲ್ಲವಾದರೆ ಬರುವಂತಹ ದಿನಗಳಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಪ್ರತಿ ಒಬ್ಬ ಮನೆಗೊಬ್ಬ ನಾಯಕ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ಪ್ರಸಂಗ ಎದುರಿಸಬೇಕಾಗುತ್ತದೆ ಎಂದು ವಾಲ್ಮೀಕಿ ನಾಯಕ ಸಮುದಾಯದ ಸಂಘಟನೆಯ ಯುವ ಮುಖಂಡ ಹೋರಾಟಗಾರ ಮಹೇಶ ಎಸ್ ಶಿಗೀಹಳ್ಳಿ ರವರು ಎಚ್ಚರಿಕೆ ನೀಡಿದ್ದಾರೆ.

error: Content is protected !!