ಬೆಳಗಾವಿ ೨೯: ಸ್ಥಳೀಯ ರುಕ್ಮಿಣಿನಗರ ಅಂಗನವಾಡಿ ಕ್ರಮಾಂಕ ೧೨೪, ೧೨೬ರಲ್ಲಿ ಋತುಸ್ರಾವ ನೈರ್ಮಲ್ಯ ನಿರ್ವಹಣೆ ದಿನವನ್ನು ದಿ. ೨೮ರಂದು ಆಚರಿಸಲಾಯಿರತು.
ವಲಯ ಮೇಲ್ವಿಚಾರಕಿ ಶಾಂತಾ ಗುಡಿ ಇವರು ಮಾತನಾಡಿ ಋತುಸ್ರಾವ ಸಮಯದಲ್ಲಿ ಕೈಗೊಳ್ಳುವ ಸುರಕ್ಷತೆ, ಮೂಲಭೂತ ಸೌರ‍್ಯಗಳಾದ ನೀರು, ಶೌಚಾಲಯಗಳ ಲಭ್ಯತೆ, ಸ್ಯಾನಿಟರಿ ಪ್ಯಾಡಗಳ ಉಪಯೋಗ ಕುರಿತು ಅರಿವು ಮೂಡಿಸಿದರು.
ಕರ‍್ಯಕ್ರಮಕ್ಕೆ ನಗರಸೇವಕಿ ಶಾಮೋಬಿನ್ ಸಲೀಂ ಪಠಾಣ, ಬಾಲ ವಿಕಾಸ ಸಲಹಾ ಸಮಿತಿ ಅಧ್ಯಕ್ಷರಾದ ಸಭಾ ಕಿತ್ತೂರ, ವಿದ್ಯಾ ಕೊಡಲ್ಯಾಳ ಇವರು ಆಗಮಿಸಿದ್ದರು.
ಅಂಗನವಾಡಿ ಕಾರ‍್ಯಕರ್ತೆಯರಾದ ಮಂಜುಳಾ ಬಿರ್ಜೆ, ರೇಣುಕಾ ಖಟಾವಕರ, ತಂಜಿಲಾ ಸೊಲ್ಲಾಪುರೆ, ಸಾರಿಕಾ ಚವ್ಹಾನ, ಸುರೇಖಾ ದುರ್ಗಣ್ಣವರ, ಶಶಿಕಲಾ ಹಿರೇಮಠ, ಸಾವಿತ್ರಿ ದುಲ್ಲಂಗೆ ಸೇರಿದಂತೆ ಸಹಾಯಕಿಯರು ಪಾಲಕರು, ಕಿಶೋರಿಯರು ಭಾಗವಹಿಸಿದ್ದರು.