23/12/2024
IMG_20240516_101826

ಇಂದೋರ್-೧೬ – ಇಂದೋರ್‌ನಲ್ಲಿ ನಿನ್ನೆ (ಬುಧವಾರ) ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ 8 ಜನರು ದುರದೃಷ್ಟವಶಾತ್ ಸಾವನ್ನಪ್ಪಿದ್ದಾರೆ. ಇಂದೋರ್-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ಘಾಟ್‌ಬಿಲ್ಲದ್ ಬಳಿ ಅಪಘಾತ ಸಂಭವಿಸಿದೆ.

ಬುಧವಾರ ರಾತ್ರಿ 10.30 ರಿಂದ 11.00 ರ ನಡುವೆ ಅಪಘಾತ ಸಂಭವಿಸಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಮೃತರೆಲ್ಲರೂ ಗುಣಾ ನಿವಾಸಿಗಳಾಗಿದ್ದು, ಬಾಗ್ ತಾಂಡಾದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು. ಅಲ್ಲಿಂದ ವಾಪಸಾಗುತ್ತಿದ್ದಾಗ ಈ ಕುಟುಂಬ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ 7 ಪುರುಷರು ಹಾಗೂ 1 ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬ ಯುವಕ ಗಾಯಗೊಂಡಿದ್ದ. ಮೃತರಲ್ಲಿ ಒಬ್ಬರು ಶಿವಪುರಿಯ ಯುವ ಪೊಲೀಸ್ ಅಧಿಕಾರಿಯಾಗಿದ್ದು, ಗುಣಾದಲ್ಲಿ ನಿಯೋಜಿಸಲಾಗಿತ್ತು.

error: Content is protected !!