01-ಚಿಕ್ಕೋಡಿ ಲೋಕಸಭಾ ಮತಕ್ಷೇತ್ರ: ಎರಡನೇ ಹಂತದ ಇ.ವಿ.ಎಂ.ರ್ಯಾಂಡಮೈಜೇಷನ್
ಚಿಕೋಡಿ-೨೪: ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಮತಗಟ್ಟೆವಾರು ಎಲೆಕ್ಟ್ರಾನಿಕ್ ಮತಯಂತ್ರಗಳ ರ್ಯಾಂಡಮೈಜೇಷನ್ ಅನ್ನು ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಎರಡನೇ ಹಂತದ ರ್ಯಾಂಡಮೈಜೇಷನ್ ಜರುಗಿಸಲಾಯಿತು.
ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಜಿ.ಎಸ್.ಪಾಂಡಾ ದಾಸ್, ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿಗಳ ಸಮ್ಮುಖದಲ್ಲಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬುಧವಾರ(ಏ.24) ರಂದು ರ್ಯಾಂಡಮೈಜೇಷನ್ ಪ್ರಕ್ರಿಯೆ ಜರುಗಿತು.
ಎರಡನೇ ಹಂತದ ಇ.ವಿ.ಎಂ. ರ್ಯಾಂಡಮೈಸೇಷನನಲ್ಲಿ 4547 ಬ್ಯಾಲೆಟ್ ಯುನಿಟ್, 2461 ಕಂಟ್ರೋಲ್ ಯುನಿಟ್ ಹಾಗೂ 2461 ವಿ.ವಿ.ಪ್ಯಾಟಗಳ ರ್ಯಾಂಡಮೈಸೇಷನ್ ಕೈಗೊಳ್ಳಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ ಅವರು ಎರಡನೇ ಹಂತದ ರ್ಯಾಂಡಮೈಜೇಷನ್ ಮೂಲಕ ನಿರ್ಧರಿಸಲಾಗಿರುವ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಮಸ್ಟರಿಂಗ್ ದಿನ ಮತಗಟ್ಟೆ ಅಧಿಕಾರಿಗಳ ತಂಡದ ಮೂಲಕ ಆಯಾ ಮತಗಟ್ಟೆಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಏ.25, 26 ಹಾಗೂ 27 ರಂದು ಮನೆ ಮನೆಗಳಿಗೆ ತೆರಳಿ ಮತಸಂಗ್ರಹ ನಡೆಯಲಿದೆ. ಈಗಾಗಲೇ ನಿಗದಿತ ನಮೂನೆ ಭರ್ತಿಮಾಡುವ ಮೂಲಕ ಮನೆಯಿಂದ ಮತ ಚಲಾವಣೆಗೆ ಒಪ್ಪಿಗೆ ನೀಡಿರುವ 85 ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನರಿಂದ ಮತಸಂಗ್ರಹ ಮಾಡಲಾಗುವುದು ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ ವಿವರಿಸಿದರು.
ಮನೆ ಮನೆಗಳಿಗೆ ತೆರಳಿ ಮತ ಸಂಗ್ರಹಿಸುವ ಸಂದರ್ಭದಲ್ಲಿ ರಾಯಕೀಯ ಪಕ್ಷಗಳ ಏಜೆಂಟರು ಉಪಸ್ಥಿತರಿರಬಹುದು. ಆದರೆ ಈ ಬಗ್ಗೆ ಆಯಾ ಪಕ್ಷ ಅಥವಾ ಅಭ್ಯರ್ಥಿಗಳು ಏಜೆಂಟರನ್ನು ನೇಮಿಸಿ ಮುಂಚಿತವಾಗಿ ತಿಳಿಸಬೇಕು ಎಂದರು.