23/12/2024
IMG-20240415-WA0042

ಬೆಳಗಾವಿ-೧೫: ಎಲ್ಲ‌ ಮಹಿಳೆಯರಿಗೆ ಸ್ವಾಭಿಮಾನದ ಪ್ರಶ್ನೆ. ಶಕ್ತಿ ಕೊಟ್ಟಿರುವ ಕಾರ್ಯಕ್ರಮದಿಂದ ದಾರಿ ತಪ್ಪಿದ್ದಾರೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸಲು ಎಲ್ಲರೂ ಪ್ರತಿಯೊಂದು ತಾಲೂಕಿನಲ್ಲಿ ಹೋರಾಟ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕರೆ ನೀಡಿದರು.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯ ಲಾಭ ಪಡೆಯುತ್ತಿರುವ ಬಿಜೆಪಿಯ ಮೂವರಿಗೆ ಹಿಂಪಡೆಯುವಂತೆ ಕರೆ ಕೊಡಲಿ ನೋಡಣ ಎಂದು ಕುಮಾರಸ್ವಾಮಿಗೆ ಸವಾಲ್ ಹಾಕಿದರು.
ಪ್ರಜಾ ಧ್ವನಿ ಬೆಳಗಾವಿಯಲ್ಲಿ ಯಾತ್ರೆ ಪ್ರಾರಂಭ ಮಾಡಿ ಚಿಕ್ಕೋಡಿಯಲ್ಲಿ ಗೃಹ ಜ್ಯೋತಿ ಘೋಷಣೆ ಮಾಡಿ ರಾಜ್ಯದ ವಿವಿಧ ಮೂಲೆಯಲ್ಲಿ ಯಾತ್ರೆ ಆರಂಭಿಸಿ ಮೈಸೂರಿನಲ್ಲಿ ಅಂತ್ಯಗೊಳಿಸಿ.
ಬಿಜೆಪಿಯ ಪ್ರಣಾಳಿಕೆಗೆ ಶಕ್ತಿ ಯಾವತ್ತು ಬರುವುದಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರಕಾರ ಇತ್ತು. ಇನರ ಭಾವನೆ ಬಗ್ಗೆ ಎಂದಿಗೂ‌ವ ವಿಚಾರ ಮಾಡಲಿಲ್ಲ. ಕಳೆದ ಚುನಾವಣೆಯ ಪ್ರಣಾಳಿಕೆಯಲ್ಲಿ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುವುದಾಗಿ ಹೇಳಿದ್ದರು. ನಿಮಗೆ ಅವಕಾಶ ಇದ್ದಾಗ. ಎಷ್ಟು ಹಣ ಬಂತು. ಜನರ ಖಾತೆಗೆ ಹಣ ಹಾಕಿದರಾ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಜೆ.ಪಿ.ನಡ್ಡಾ ಸೇರಿದಂತೆ ಎಲ್ಲ ನಾಯಕರು ಉತ್ತರ ಕೊಡಬೇಕು ಎಂದರು.
ಬಿಜೆಪಿಯವರು ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದರು. ಯಾವ ರೈತರ ಆದಾಯ ದ್ವಿಗುಣವಾಗಿದೆ. ಕೇಂದ್ರ ಸರಕಾರ ರೈತ ವಿರೋಧಿ ಕೃಷಿ ಮಸೂದೆ ಜಾರಿ ಮಾಡಿ ಹಿಂಪಡೆದರು. ನಮ್ಮ ಸರಕಾರ ಬಂದ ಬಳಿಕ ನಾವು ಅದನ್ನು ಹಿಂಪಡೆಯಲು ರಾಜ್ಯ ಸರಕಾರ ಮುಂದಾದಾಗ ಅದಕ್ಕೆ ವಿರೋಧಿಸಿದರು ಎಂದರು.
ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡುವುದಾಗಿ ಘೋಷಿಸಿದ್ದರು. ಎಷ್ಟು ಜನರಿಗೆ ಉದ್ಯೋಗ ಕೊಡಿಸಿದ್ದೀರಿ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನಾವು ಜನರಿಗೆ ನೀಡಿದ ಭರವಸೆಯ ಹಾಗೆ ಈಡೇರಿಸಿದ್ದೇವೆ. ಅವರು ನಮಗೆ ಮತ ಹಾಕುತ್ತಾರೆ. ನೀವು ಜನರಿಗೆ ಏನು ಮಾಡಿದ್ದೀರಿ ಎಂದು ಬಿಜೆಪಿಗೆ ಮತಹಾಕಬೇಕು ಎಂದರು.
ಕೊರೊನಾ ಸಂದರ್ಭದಲ್ಲಿ ಕೇಂದ್ರದ ಸಚಿವರಾಗಿದ್ದ ಸುರೇಶ ಅಂಗಡಿ ಅವರು ಮೃತಪಟ್ಟಾಗ ಬೆಳಗಾವಿಯಲ್ಲಿ ಜನರ ದರ್ಶನ ಮಾಡಲು ಅವಕಾಶ ಕೊಡದೆ ಕೆಟ್ಟ ರೀತಿಯಲ್ಲಿ ಅಂತ್ಯಸಂಸ್ಕಾರ ಮಾಡಿದ್ದು ದುರಂತ ಎಂದರು.
ಶಾಸಕರಾದ‌ ಲಕ್ಷ್ಮಣ ಸವದಿ, ಮಹಾಂತೇಶ ಕೌಜಲಗಿ, ರಾಜು ಕಾಗೆ, ಆಸೀಫ್ ಸೇಠ್, ಬಾಬಾಸಾಹೇಬ ಪಾಟೀಲ,‌ಮಹೇಶ ತಮ್ಮಣ್ಣವರ, ಗಣೇಶ ಹುಕ್ಕೇರಿ, ಅಶೋಕ ಪಟಣ್ಣ, ವಿಧಾನ ಪರಿಷತ್ತಿನ ‌ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಪ್ರಕಾಶ ಹುಕ್ಕೇರಿ,ವಿನಯ ನಾವಲಗಟ್ಟಿ, ಬುಡಾ ಅಧ್ಯಕ್ಷ ಲಕ್ಷ್ಮಣ ಚಿಂಗಳೆ ಸೇರಿದಂತೆ ಮುಂತಾದವರು ಹಾಜರಿದ್ದರು.

error: Content is protected !!