ಬೆಳಗಾವಿ-೧೩:ಸಮಾಜವನ್ನು ತಿದ್ದಿ ತೀಡುವ ಸಾಹಿತ್ಯದ ಕೃತಿಗಳ ಮೂಲಖ ತಮ್ಮ ಸಂದೇಶಗಳನ್ನು ಜನರ ಮನಸ್ಸಿಗೆ ಮುಟ್ಟಿಸುವ ಸಾರ್ಥಕ ಪ್ರಯತ್ನ ಮಾಡಿದ ಕನ್ನಡದ ಹರಿದಾಸರ ಸಂದೇಶಗಳನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಹರಿದಾಸ ಹಬ್ಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಡಾ ರಾಯಚೂರು ಶೇಷಗಿರಿದಾಸ್ ಅವರು ಹೇಳಿದರು.
ನಗರದ ಕರೆಯಲಾದ ಶುಕ್ರವಾರ ನಡೆದ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ಇದೆ ಏಪ್ರಿಲ್ 16,17,18ರಂದು ಮೂರು ದಿನಗಳ ಬೆಳಗಾವಿಯ ಭಾಗ್ಯನಗರದ ರಾಮನಾಥ ಮಂಗಳ ಕಾರ್ಯಾಲಯದಲ್ಲಿ ಬೆಳಗಾವಿಯ ಹರಿದಾಸ ಸೇವಾ ಸಮಿತಿ ಹಾಗೂ ಬೆಳಗಾವಿಯ ವಿಶ್ವ ಮಧ್ವ ಮಹಾ ಪರಿಷತ್ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ಪ್ರತಿ ದಿವಸ ಮಧ್ಯಾಹ್ನ 3 ಗಂಟೆಯಿಂದ ಪ್ರಾರಂಭವಾಗುವ ಈ ಕಾರ್ಯಕ್ರಮ ಭಜನೆ, ಉಪನ್ಯಾಸ, ದಾಸವಾಣಿ, ಆಶೀರ್ವಚನ, ಸನ್ಮಾನ ಪ್ರಶಸ್ತಿ ಪ್ರಧಾನ ಹೀಗೆ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಹರಿದಾಸರಿಗೆ ನಮನಗಳನ್ನು ಸಲ್ಲಿಸಲಾಗುವ ಈ ಹರಿದಾಸ ಹಬ್ಬ ಅರ್ಥಪೂರ್ಣವಾಗಲಿದೆ ಎಂದು ಹೇಳಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಭೀಮಸೇನ ಮಿರ್ಜಿ, ಜಯತೀರ್ಥ ಸವದತ್ತಿ, ಕೇಶವ ಮಾಹುಲಿ, ಮಧುಕರ ತೇರದಾಳ, ಪ್ರಭಾಕರ್ ಸರಳಾಯಿ, ಶ್ರೀಧರ ಕುಲ್ಕರ್ಣಿ, ಸಂಜೀವ ಕುಲ್ಕರ್ಣಿ, ಶೇಷಗಿರಿ ಕುಲ್ಕರ್ಣಿ ಇತರರು ಹಾಜರಿದ್ದರು