23/12/2024
IMG-20240404-WA0037

ಬೆಳಗಾವಿ-೦೪:2024 ರ ಲೋಕಸಭಾ ಚುನಾವಣೆಯ ಕಾವು ತುಂಬಾ ಜೋರಾಗಿದ್ದು ಹೊಸ ಅಭ್ಯರ್ಥಿಗಳ ಪರವಾಗಿ ಜನ ಮೆಚ್ಚುಗೆ ವ್ಯಕ್ತಪಡಿಸುತಿದ್ದಾರೆ .

ಎಲ್ಲಿ ಹೋದರೂ ಹೊಸ ಅಭ್ಯರ್ಥಿಗಳ ಪರವಾಗಿ ಜನ ನಿಲ್ಲುತ್ತಿದ್ದಾರೆ. ಹೊಸ ಅಭ್ಯರ್ಥಿಗಳಿಗೆ ಅವಕಾಶ ನೀಡಿದರೆ ಬೆಳಗಾವಿ ಜಿಲ್ಲೆಯಲ್ಲಿ ಮಾದರಿಯ ಅಭಿವೃದ್ಧಿಯಾಗಲು ಸಾದ್ಯ . ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೊಸ ಗ್ಯಾರೆಂಟಿಗಳು ಅನುಷ್ಠಾನ ಆಗಲಿವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೊಸ ಭರವಸೆ ನೀಡಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ . ಬೆಳಗಾವಿ ಮತ್ತು ಚಿಕ್ಕೋಡಿ ಯಲ್ಲಿ ಹೊಸ ಅಭ್ಯರ್ಥಿಗಳು ಗೆಲ್ಲುವುದು ಖಚಿತವಾಗಿದೆ ಹಾಗೆಯ ಹೊಸ ಅಭ್ಯರ್ಥಿಗಳಾದ ಮೃಣಾಲ ಹೆಬ್ಬಾಳಕರ ರವರ ತಾಯಿ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ ರವರು ಅವರ ಕ್ಷೇತ್ರದಲ್ಲಿ ಮಾಡಿದ ಸೇವೆ ತಮ್ಮ ಕ್ಷೇತ್ರಕ್ಕೆ ಅಭಿವೃದ್ದಿಗಾಗಿ ತಂದ ಮಾದರಿಯ ಅನುದಾನ ಕೆಲ್ಸ ಕಾರ್ಯಗಳನ್ನು ನೋಡಿ
ಜನ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ರವರ ಪುತ್ರ ಶ್ರೀ ಮೃಣಾಲ ಮೇಲೆ ಹೆಚ್ಚು ಆಸಕ್ತಿ ತೋರಿದ್ದಾರೆ … ಹಾಗೆಯೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ಸತೀಶ್ ಜಾರಕಿಹೊಳಿ ರವರು ಅವರ ಕ್ಷೇತ್ರದಲ್ಲಿ ಮಾಡಿದ ಹೆಚ್ಚುವರಿ ಅಭಿವೃದ್ಧಿಗಳು ಮಾದರಿಯ ಕೆಲಸಗಳು ಮತ್ತು ಮಾದರಿಯ ಅನುದಾನವನ್ನು ಗಮನದಲ್ಲಿ ಇಟ್ಟುಕೊಂಡು ಅವರ ಸುಪುತ್ರಿ ಪ್ರಿಯಾಂಕ ಜಾರಕಿಹೊಳಿ ಚಿಕ್ಕೋಡಿ ಲೋಕಸಭಾ ಇವರ ಮೇಲೆ ಹೆಚ್ಚು ಆಸಕ್ತಿಯಿಂದ ಜನ ಒಲವು ತೋರಿದ್ದಾರೆ. ಪ್ರಿಯಾಂಕ ಜಾರಕಿಹೊಳಿ ಹಾಗೂ ಮೃಣಾಲ ಹೆಬ್ಬಾಳಕರ ರವರು ಕಳೆದ ಐದಾರು ವರ್ಷಗಳಿಂದ ಸಮಾಜಸೇವೆ ತೊಡಗಿಂಕೊಂಡಿದ್ದು ತಮ್ಮದೆ ಆದ ಜನ ಬೆಂಬಲ ಹೊಂದಿದ್ದಾರೆ ಜನಪ್ರಿಯತೆ ಗಳಿಸಿದ್ದಾರೆ ಒಟ್ಟಿನಲ್ಲಿ ಈ ಬಾರಿ ಬೆಳಗಾವಿ ಚಿಕ್ಕೋಡಿ ಎರಡು ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳು ದಾಖಲೆಯ ಇತಿಹಾಸದ ಗೆಲುವು ಸಾಧಿಸುವುದು ಖಚಿತವಾಗಿದೆ ಎಂದು ಮಹೇಶ ಶಿಗೀಹಳ್ಳಿ (ರಾಜ್ಯಾದ್ಯಕ್ಷ) ಯುವ ಹೋರಾಟಗಾರ ಕ ಪ ಪಂ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ರವರು ಹೇಳಿಕೆ ನೀಡಿದ್ದಾರೆ.

error: Content is protected !!