23/12/2024

IMG 20240310 WA0006 -ಬೆಳಗಾವಿ ೧೮: ವಾರದ ವಚನೋತ್ಸವ ಕರ‍್ಯಕ್ರಮದಲ್ಲಿ ಸಂಗೀತ ಕಲಾವಿದೆ ಸುಜಾತಾ ಕಲಮೇಶ ಇವರನ್ನು ರವಿವಾರ ಸತ್ಕರಿಸಿ ಗೌರವಿಸಲಾಯಿತು.

ಝಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕರ‍್ಯಕ್ರಮದಲ್ಲಿ ಸುಜಾತಾ ಇವರು ಆಯ್ಕೆ ಹೊಂದಿ ಅಂತಿಮ ಹಂತದವರೆಗೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಸಂಗೀತ ಕಲಾವಿದೆಯೂ ಆದ ಇವರನ್ನು ಸತ್ಕರಿಸಲಾಯಿತು.

ಮಲ್ಲಿಕಾರ್ಜುನ ಶಿರಗುಪ್ಪಿಶೆಟ್ಟರ ಪ್ರಾರ್ಥನೆ ಹೇಳಿದರು, ಉಮಾದೇವಿ ನಿಜಗುಲಿ, ಬಸವರಾಜ ಕಮ್ಮಾರ, ಅಭಿಲಾಷ, ಸುಜಾತಾ ಕಲಮೇಶ, ಶ್ರೀರಂಗ ಜೋಶಿ ಇವರು ಸಂಗೀತ ಕರ‍್ಯಕ್ರಮ ನೀಡಿದರು. ಅಡವಯ್ಯಾ ಮಠದ, ಬಸವರಾಜ ಮಠದ ತಬಲಾ ಸಾಥ ನೀಡಿದರು. ಭೀಮನಗೌಡ ಪಾಟೀಲ, ಕಲಮೇಶ ಬಡಿಗೇರ ಹಾರ್ಮೋನಿಯಂ ನುಡಿಸಿದರು. ಬಿ.ಎಚ್. ಮಾರದ, ನಿರುಪಾದಯ್ಯ ಕಲ್ಲೋಳಿಮಠ ಮಾತನಾಡಿದರು.

ಕಾರ‍್ಯಕ್ರಮದಲ್ಲಿ ವಿರುಪಾಕ್ಷ ವಾಲಿ, ರಾಜಕುಮಾರ ಮ್ಯಾಗೋಟಿ, ಭಾರತಿ ಅಮಾಸೆ, ರೇಣುಕಾ ಖಟಾವಕರ, ಎಸ್,ಎಸ್, ನಂಜನ್ನವರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಗೋಪಾಲ ಖಟಾವಕರ ನಿರೂಪಿಸಿ ವಂದಿಸಿದರು.

error: Content is protected !!