ಬೆಳಗಾವಿ-25:ಸದಾ ಸಮಾಜಮುಖಿ ಕಾರ್ಯ ಮಾಡಿಕೊಂಡ ಬರುತ್ತಿರುವ ಸರ್ವ ಲೋಕಸೇವಾ ಫೌಂಡೇಶನ್ ವತಿಯಿಂದ ದುರ್ಗಾದೇವಿ ದೇವಸ್ಥಾನದಲ್ಲಿ ಉಡಿ ತುಂಬಿದ ಸೀರೆಯನ್ನು ಇಲ್ಲಿನ ದೇವರಾಜ ಅರಸ ಕಾಲೋನಿಯ ಶ್ರೀಮತಿ ಚಿನ್ನಮ್ಮ ಬಸವಂತಯ್ಯ ಹಿರೇಮಠ ವೃದ್ಧಾಶ್ರಮದಲ್ಲಿರುವರಿಗೆ ಶನಿವಾರ ವೀರೇಶ ಬಸಯ್ಯ ಹಿರೇಮಠ ನೇತೃತ್ವದಲ್ಲಿ ಹಂಚಿಕೆ ಮಾಡಲಾಯಿತು.
ಶಿವರಾತ್ರಿಯ ಹಬ್ಬದ ನಿಮಿತ್ತವಾಗಿ ಸರ್ವಲೋಕಾ ಸೇವಾ ಫೌಂಡೇಶನ್ ದಿನ ದಲಿತರಿಗೆ ಸಹಾಯ ಮಾಡುವುದು, ಗಿಡ ಮರದಲ್ಲಿರುವ ಅನಾಥ ದೇವರ ಫೋಟೋಗಳಿಗೆ ವಿಧಿ ವಿಧಾನ ಮಾಡುವುದು, ಪ್ರಾಣಿಗಳ ಆರೈಕೆ ಸೇರಿದಂತೆ ವಿವಿಧ ಕಾರ್ಯಕ್ರಮ ಮಾಡಿಕೊಂಡು ಬರುತ್ತಿರು ವೀರೇಶ ಬಸಯ್ಯ ಹಿರೇಮಠ ಅವರ ತಂಡ ಇಂದು ಭಕ್ತರು ದುರ್ಗಾದೇವಿಗೆ ಉಡಿ ತುಂಬಿದ ಸೀರೆ ಹಾಳಾಗಬಾರು. ಅದು ದೇವರಿಗೆಯೇ ಸಮರ್ಪಣೆಯಾಗಬೇಕು ಎನ್ನುವ ಉದ್ದೇಶದಿಂದ ವೃದ್ಧಾಶ್ರಮದ ಹಿರಿಯ ಜೀವಗಳಿಗೆ ಹಂಚಿಕೆ ಮಾಡಿ ಜನರ ಮೆಚ್ಚುಗೆ ಗಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಂ.ಎಸ್.ಚೌಗುಲಾ, ಪ್ರೀತಿ ಸೇರಿದಂತೆ ಹಲವಾರು ಪಾಲ್ಗೊಂಡಿದ್ದರು.