ನೇಸರಗಿ-20: ಜೀವನದಲ್ಲಿ ವ್ಯಾಸಂಗ ಸಮಯದಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಮತ್ತು ಗುರಿ ತಲುಪಲು ನಮಗೆ ಪಾಠ ಹೇಳಿ ಜೀವನದ ರೀತಿ ನೀತಿಗಳನ್ನು ತಿಳಿ ಹೇಳಿ ಆದರ್ಶ ಜೀವನ ನಡೆಸಲು ಶಿಕ್ಷಕರ ಪಾತ್ರ ಮಖ್ಯವಾದದ್ದು ಎಂದು ಮಾಜಿ ಶಾಸಕರು ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೆಶಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ಸೋಮವಾರದಂದು ಗ್ರಾಮದ ವಿದ್ಯಾ ಮಂದಿರ ಪ್ರೌಡ ಶಾಲೆ ಮತ್ತು ಬೆಳಗಾವಿ ಬೋರ್ಡ ಆಪ್ ಎಜ್ಯುಕೇಷನ್ ಮತ್ತು ಸೋಷಿಯಲ್ ವೆಲಪೇರ್ ಸೊಸೈಟಿ ಇದರ ಸಹಯೋಗದಲ್ಲಿ ನಡೆದ ಸಹ ಶಿಕ್ಷಕರಾದ ಎಂ ಆರ್.ಹೆಗಡೆ ಮತ್ತು ಆರ್ ಸಿ.ಯರಗಟ್ಟಿ ಇವರ ಸೇವಾ ನಿವೃತ್ತಿ ,ಬಿಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ ಈ ಪ್ರೌಢಶಾಲೆಯಲ್ಲಿ ಶಿಕ್ಷಣ ಕಲಿತದ್ದು ಹೆಮ್ಮೆ ಅನಿಸುತ್ತದೆ ಎಂದರು.
ವಿದ್ಯಾಮಂದಿರ ಪ್ರೌಡ ಶಾಲೆಯ ಸಂಚಾಲಕರಾದ ಪಾದರ ಮೆನಿನೋ ಗೋನ್ವಾಲ್ವಿಸ್ ಮಾತನಾಡಿ ಶಿಕ್ಷಣದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಸ್ಪೂರ್ತಿ ಆಗಬೇಕು ಆದರ್ಶ ಶಿಕ್ಷಕರ ಜೀವನ ನಿವೃತ್ತಿ ನಂತರ ಸುಖಕರವಾಗಿರಲಿ ಎಂದರು.
ಈ ಕಾರ್ಯಕ್ರಮದಲ್ಲಿ ಬಿಡಿಬಿಇ ಕಾರ್ಯದರ್ಶಿಗಳಾದ ಪಾದರ್ ಜರಾಲ್ಡ್,ಕೆಶ್ವಾಪೂರ ಹುಬ್ಬಳ್ಳಿಯ ಸೆಂಟ್ ಮೇರಿ ಮುಖ್ಯೋಪಾಧ್ಯಾಯ ಪಾದರ್ ಥಾಮಸ್ ಚಂಪಾಕರ,ಖಾನಾಪೂರ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪಾದರ್ ನೆಲ್ಸನ ಪಿಂಟೋ,ದಾರವಾಡದ ಪಾದರ್ ಸಿರಿಲ್,ನಿರೂಪಣೆಯನ್ನು ಸೈಮನ್ಸ ಪರ್ನಾಂಡಿಸ್,ವಂದನಾರ್ಪನೆಯನ್ನು ಜೆ ಎಂ.ಪಟ್ಟಣಶೆಟ್ಟಿ,ಬೋಗುರ ಗುರುಗಳು ಸ್ವಾಗತ ನೇರವೇರಿಸಿದರು.ಈ ಸಂದರ್ಭದಲ್ಲಿ ಭೋಧಕ ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.