ಬೆಳಗಾವಿ-14 : ಸ್ವಾಮಿ ವಿವೇಕಾನಂದರು ಪಾವನಗೊಳಿಸಿದ ನೆಲದಲ್ಲಿ ರಾಮಕೃಷ್ಣ ಮಿಷನ್ ಆಶ್ರಮವು 2000ನೆ ಇಸ್ವಿಯಲ್ಲಿ ಪ್ರಾರಂಭವಾಯಿತು, ಅದೇ ರೀತಿ ಇಲ್ಲಿ 2004ರಲ್ಲಿ ಭಗವಾನ ರಾಮಕೃಷ್ಣ ಪರಮಹಂಸರ “ವಿಷ್ವಭಾವೈಕ್ಯ” ಮಂದಿರವನ್ನು ಸ್ಥಾಪಿಸಿ ಉದ್ಘಾಟಿಸಲಾಯಿತು,
ಈ ಸವಿನೆನಪಿಗಾಗಿ ಈಗ 20ನೇ ವಾರ್ಷಿಕೋತ್ಸವವನ್ನು ಇದೇ ಫೆಬ್ರುವರಿ 16,17,18ನೇ ಮೂರು ದಿನಗಳ ಕಾಲ ಆಚರಿಸಲಾಗುವುದು
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮಿ ಆತ್ಮಪ್ರಾಣಾನಂದ ಅವರು ಸಾರ್ವಜನಿಕರಿಗಾಗಿ ರವಿವಾರ 18ನೇ ಫೆಬ್ರುವರಿ, 2024ರಂದು ಬೆಳಿಗ್ಗೆ ಹತ್ತು ಗಂಟೆಗೆ ಆಧ್ಯಾತ್ಮಿಕ ಸಮ್ಮೇಳನ ನಡೆಯಲಿದ್ದು, ಅದೇ ದಿನ ಸಂಜೆ 6 ಗಂಟೆಗೆ ಗೀತರಾಮಾಯಾಣ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವದೆಂಬ ಮಾಹಿತಿ ನೀಡಿದ್ದಾರೆ.
ಕಾರಣ ಬೆಳಗಾವಿ ಹಾಗೂ ಸುತ್ತಮುತ್ತಲಿನ ಗ್ರಾಮದ ಎಲ್ಲಾ ಸಾರ್ವಜನಿಕರು ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಆಧ್ಯಾತ್ಮ ವಿಷಯದ ಪ್ರಯೋಜನೆ ಪಡೆಯಬೇಕೆಂದು ಕೋರಿದರು..
ದಿನಾಂಕ 16ರಂದು ವಿವಿಧ ಕಾಲೇಜಿನ 700 ವಿದ್ಯಾರ್ಥಿಗಳಿಂದ ಯುವಮೇಳ, ಹಾಗೂ 17ನೇ ತಾರಿಕಿನಂದು, 700 ಶಿಕ್ಷಣ ಪದವಿದರರ ಹಾಗೂ ಶಿಕ್ಷಕರಿಂದ ಶಿಕ್ಷಕರ ಸಮಾವೇಶವನ್ನು ಆಯೋಜಿಸಲಾಗಿದ್ದು, ಪ್ರತಿದಿನ ಎಲ್ಲಾ ಕಾರ್ಯಕ್ರಮ ಮುಗಿದ ನಂತರ ಮಹಾಪ್ರಸಾದದ ವ್ಯವಸ್ಥೆ ಇರುವದೆಂಬ ಮಾಹಿತಿ ನೀಡಿದ್ದಾರೆ..
ಸಂಸ್ಕೃತಿ, ಸಂಪ್ರದಾಯ, ಆಧ್ಯಾತ್ಮಿಕ ಚಿಂತನೆಗಳ ವಿಷಯಗಳನ್ನು ತಿಳಿಸಿಕೊಡುವ ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಬೇಕಾಗಿ ವಿನಂತಿಸಿದ್ದಾರೆ.