23/12/2024
IMG-20240213-WA0005

ಬೆಳಗಾವಿ-13:ಕರಾಟೆ ವಿದೇಶದಲ್ಲಿ ಹುಟ್ಟಿದರೂ ಭಾರತದಲ್ಲಿ ಪ್ರಸಿದ್ಧಿ ಪಡೆದಿದೆ. ಕರಾಟೆಯಯಲ್ಲಿ ಬೆಳಗಾವಿಯ ವಚನಾ ದೇಸಾಯಿ ಚಿಕ್ಕ ವಯಸ್ಸಿನಲ್ಲಿಯೇ ಬ್ಲ್ಯಾಕ್ ಬೆಲ್ಟ್ ಪಡೆದು ಸಾಧನೆ ಮಾಡಿದ್ದು ಅನನ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹೇಳಿದರು.

ಕುಮಾರ ಗಂಧರ್ವ ಸಭಾಂಗಣದಲ್ಲಿ ಭಾನುವಾರ ನಡೆದ ಇಂಡಿಯನ್ ಕರಾಟೆ ಕ್ಲಬ್ ಹಾಗೂ ಬೆಳಗಾವಿ ಜಿಲ್ಲಾ ಕ್ರೀಡಾ ಕರಾಟೆ ಅಸೋಸಿಯೇಷನ್ ವತಿಯಿಂದ ಕರಾಟೆಯಲ್ಲಿ ಸಾಧನೆ ಮಾಡಿದ ವಚನಾ ಬಸವರಾಜ ದೇಸಾಯಿ ಅವರಿಗೆ ಕರಾಟೆ ಬ್ಲ್ಯಾಕ್ ಬೆಲ್ಟ್ ಪ್ರಶಸ್ತಿ

ಪ್ರದಾನ ಮಾಡಿ ಮಾತನಾಡಿದರು. ಸಣ್ಣ ವಯಸ್ಸಿನಲ್ಲಿಯೆ ದೊಡ್ಡ ಸಾಧನೆ ಮಾಡಿರುವ ವಚನಾ ದೇಸಾಯಿ ಆತ್ಮ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎನ್ನುವ ಕಲೆಯನ್ನು ಕರಾಟೆಯಲ್ಲಿ ತೋರಿಸಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾಳೆ. ಬಾಲ್ಯದಿಂದಲೇ ರಾಜ್ಯಮಟ್ಟದ ಕರಾಟೆಯಲ್ಲಿ ಬೆಳಗಾವಿಯಿಂದ ಭಾಗಿಯಾಗಿ ಪ್ರಶಸ್ತಿ ಪಡೆದು ಮಿಂಚಿ ಈಗ ಬ್ಲ್ಯಾಕ್ ಬೆಲ್ಟ್ ಪಡೆದು ಬೆಳಗಾವಿಯ ಕೀರ್ತಿ ಪತಾಕೆ ಹಾರಿಸುವುದರ ಜೊತೆಗೆ ಸಮಾಜವನ್ನು ಕಾಯುವ ಕರಾಟೆ ಕಲೆ, ಏಕಾಗ್ರತೆ, ಶಿಸ್ತನ್ನು ಕಲಿಸಿಕೊಟ್ಟಿದ್ದಾರೆ. ಗುರುವಿನಿಂದ ಕರಾಟೆ ಕಲಿತ ವಿದ್ಯಾರ್ಥಿ ಗುರುವಿಗೆ ನಮಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಾಡಿದ್ದು ನಿಜಕ್ಕೂ ಶ್ಲಾಘನೀಯ ಎಂದರು.
ಬೆಳಗಾವಿ ಜಿಲ್ಲಾ ಮುಖ್ಯ ಪರೀಕ್ಷಕ ಗಜೇಂದ್ರ ಕಾಕತಿಕರ ಮಾತನಾಡಿ, ವಚನಾ ದೇಸಾಯಿಗೆ 3 ವರ್ಷ ಇದ್ದಾಗಲೇ ಕರಾಟೆ ತರಬೇತಿಗೆ ಪಡೆಯಲು ಪ್ರಾರಂಭಿಸಿ ಇವತ್ತು ಬೆಳಗಾವಿಯ ವಿದ್ಯಾರ್ಥಿಗಳಿಗೆ ಕರಾಟೆ ಕಲಿಸಿಕೊಡುತ್ತಿದ್ದಾಳೆ. ಮುಂದೊಂದು ದಿನ ಈ ಬಾಲಕಿ ದೇಶದ ಗಮನ ಸೆಳೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ಸಿಪಿಐಗಳಾದ ಜಾವೇದ ಮುಷಾಪುರೆ, ಕಾಲಿಮಿರ್ಚಿ, ವಚನಾ ದೇಸಾಯಿ ಸಾಧನೆಯನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಕರಾಟೆ ತರಬೇತುದಾರ ವಿಠ್ಠಲ್ ಬೋಜಗಾರ, ಅನಂತಕುಮಾರ ಬ್ಯಾಕೂಡ್, ಸುನೀತಾ ದೇಸಾಯಿ, ಗೀತಾ ದೇಸಾಯಿ ಸೇರಿದಂತೆ ಇತರರು ಹಾಜರಿದ್ದರು.

error: Content is protected !!