23/12/2024
IMG-20240213-WA0003

ನೇಸರಗಿ-13:ನಮ್ಮ ದೇಶದ ಮಹಾನ್ ಸಾಧಕರಾದ ಬುದ್ಧ, ಬಸವ,ಡಾ. ಅಂಬೇಡ್ಕರ್,ವಾಲ್ಮೀಕಿ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆದು ಶಿಕ್ಷಣಕ್ಕೆ ಒತ್ತು ಕೊಟ್ಟು ಮುನ್ನಡೆದರೆ ಯಶಸ್ಸು ಖಂಡಿತ ಎಂದು ಯುವ ಕರ್ನಾಟಕ ಭೀಮ ಸೇನೆ ,ಯುವ ಶಕ್ತಿ ಸಂಘದ ರಾಜಾದ್ಯಕ್ಷ ಪ್ರವೀಣ ಆರ್.ಮಾದರ ಹೇಳಿದರು.

ಸೋಮವಾರದಂದು ಸಮೀಪದ ಸೋಮನಟ್ಟಿ ಗ್ರಾಮದಲ್ಲಿ ಯುವ ಕರ್ನಾಟಕ ಭೀಮ ಸೇನೆ ಯುವ ಶಕ್ತಿ ಸಂಘದ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಂಘದ ಉಪಾದ್ಯಕ್ಷ ಅಕ್ಷಯ ಕೆ.ಆರ್ ಮಾತನಾಡಿ ಸಂಘಟನೆ ಮುಖಾಂತರ ಬೃಷ್ಟಾಚಾರಕ್ಕೆ ಕಡಿವಾಣ ಹಾಕಿ,ಅಭಿವೃದ್ಧಿ ಕಾರ್ಯಗಳಿಗೆ ದಲಿತ,ಹಿಂದೂಳಿದ ವರ್ಗ,ಬಡವರ ಶೋಷಿತರ, ಪರವಾಗಿ ಹೋರಾಟ ಮಾಡಿ ಸಂಘವನ್ನು ಮುನ್ನಡೆಸಬೇಕು ಎಂದರು.
ಯುವ ಮುಖಂಡ ಶಿವಪ್ಪ ಚೋಬಾರಿ ಮಾತನಾಡಿ ಡಾ.ಅಂಬೇಡ್ಕರ್ ಅವರ ಸಂವಿಧಾನ ನಮಗೆ ದಾರಿದೀಪವಾಗಿದ್ದು,ಅವರ ಆದರ್ಶ ತತ್ವಗಳನ್ನು ಬಳಸಿಕೊಂಡು ಜೀವನದಲ್ಲಿ ಬೆಳಕು ಕಾಣಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡ ಮಲ್ಲಪ್ಪ ತಿಗಡಿ,ಉಪಾದ್ಯಕ್ಷ ಮಲ್ಲವ್ವಾ ಯರಗುದ್ದಿ ,ಬೀಮಸಿ ತುಳಜನ್ನವರ,ಸಿದ್ದಪ್ಪ ತುಳಜನ್ನವರ,ಶಿವಪುತ್ರಯ್ಯ ಹಿರೇಮಠ,ಗೌಡಪ್ಪ ಹರಿಜನ,ಅರುಣ ಹಸಬಿ,ಲಕ್ಷ್ಮಣ ಹಸಬಿ,ಎಚ್ ಎಂ ನರಿ
ಸಂಘದ ಅದ್ಯಕ್ಷ ರವಿ ಹರಿಜನ,ಉಪಾದ್ಯಕ್ಷ ಮಹೇಶ ಹರಿಜನ,ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಅಕ್ಕಿಮಡಿ,ಜಿಲ್ಲಾದ್ಯಕ್ಷ ಉದಯ ಬಸೂಜಿ,ಬೈಲಹೊಂಗಲ ತಾಲೂಕಾ ಅದ್ಯಕ್ಷ ಗಂಗಾಧರ ಮಾದರ,ಯುವ ರಾಜ್ಯಾದ್ಯಕ್ಷ ಹರೀಶ ಈರಣ್ಣಿ,ಸಚಿನ್ ಕೊಲಕಾರ,ರಾಹುಲ ಮಾದರ,ರವಿ ಪವಾರ,ಪ್ರಧಾನ ಗುರುಗಳಾದ ಸಿ ಬಿ.ನರಿ,ಗೋಪಾಲ ಕಾರಿ,ಪಕ್ಕೀರಪ್ಪ ಹರಿಜನ,ರಾಜು ಹರಿಜನ,ನಾಗಪ್ಪ ಹರಿಜನ,ದುಪದಾಳ ಗುರುಗಳು ಸೇರಿದಂತೆ ಗ್ರಾಮದ ಹಿರಿಯರು, ದಲಿತ ಮುಖಂಡರು ಭಾಗವಹಿಸಿದ್ದರು.

error: Content is protected !!