07/07/2026
ಬೆಳಗಾವಿ-05: ಬೆಳಗಾವಿ ತಾಲೂಕಿನ ವಿಜಯನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜುಲೈ.4 ರಂದು ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಶಾಲಾ ಸಂಸತ್ತು ಚುನಾವಣೆಯ ಪ್ರಕ್ರಿಯೆ ನಡೆಸಲಾಯಿತು.
ಶಾಲಾ ಸಂಸತ್ತು ಎನ್ನುವುದು ವಿದ್ಯಾರ್ಥಿಗಳಲ್ಲಿ ನಾಯಕತ್ವ ಜವಾಬ್ದಾರಿ, ಪ್ರಜ್ಞೆ, ಶಿಸ್ತು, ಸೇವಾ ಮನೋಭಾವ ಹಾಗೂ ಪ್ರಜಾ ಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಒಂದು ಉತ್ತಮವಾದ ವೇದಿಕೆಯಾಗಿದೆ.
ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ತತ್ವಗಳು ಹಾಗೂ ಚುನಾವಣೆಗಳನ್ನು ಹೇಗೆ ನಡೆಸಬೇಕು ಮತ್ತು ಮತದಾನದ ಕುರಿತು ಹಾಗೂ ನ್ಯಾಯಯುತ ಪಾರದರ್ಶಕ ಚುನಾವಣೆ ನಡೆಸುವಲ್ಲಿ ಮಾರ್ಗದರ್ಶನ ನೀಡುವ ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನವನ್ನು ಹೇಗೆ ಸರಿಯಾಗಿ ಬಳಸಬೇಕು.
ಶಾಲಾ ಸಂಸತ್ತಿನ ರಚನೆ ಹಾಗೂ ಕಾರ್ಯನಿರ್ವಹಣೆಯನ್ನು ಪಾರದರ್ಶಕ ಹಾಗೂ ವೇಗವಾದ ಪರಿಣಾಮಕಾರಿಯಾಗಿ ನಡೆಸುವಲ್ಲಿ ಅಣುಕು ಪ್ರದರ್ಶಿಸಲಾಯಿತು.
ಇದರಲ್ಲಿ ಶಾಲಾ ಸಂಸತ್ತು ರಚನೆಯಾದ ನಂತರ ಸಂಸತ್ತು ಸದಸ್ಯರಿಗೆ ತಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಟ್ಟು ಶಾಲೆಯ ಸ್ವಚ್ಛತೆ, ಶಿಸ್ತು ಪರಿಸರ ಸಂರಕ್ಷಣೆ, ಗ್ರಂಥಾಲಯ ಕ್ರೀಡೆ ಹಾಗೂ ಸಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಎಲ್ಲಾ ಕಾರ್ಯಕಾರಿ ಸದಸ್ಯರಿಗೆ ತಿಳಿಸಲಾಯಿತು.
ಎಂ.ಎಂ ಮುಗಳಿ ಹಾಗೂ ಎಸ್.ಎಂ ಎ ಸಿದ್ದನ್ನವರ ಶಿಕ್ಷಕರ ಪಾತ್ರ ವಹಿಸಿದ್ದು, ವಿಜಯನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಎಂ.ಸಿ ಪತ್ತಾರ ಅವರ ಮಾರ್ಗದರ್ಶನದಲ್ಲಿ ಶಾಲಾ ಸಂಸತ್ತಿನ ಅಣುಕು ಪ್ರದರ್ಶನ ನಡೆಯಿತು.

Leave a Reply

Your email address will not be published. Required fields are marked *

error: Content is protected !!