27/06/2026
IMG-20260626-WA0020

ಬೆಳಗಾವಿ-26: ರಾಜ್ಯ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ ಡಾ. ವೈ. ಮಂಜುನಾಥ್ ಮೇಲಿನ ಇಡಿ ದಾಳಿ ಸದ್ಯಕ್ಕೆ ರಾಜಕೀಯ ಪ್ರೇರಿತ ಅನ್ನಲ್ಲ, ಇದು 6 ತಿಂಗಳ ಬಳಿಕ ಸತ್ಯ ಗೊತ್ತಾಗಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

‌ ನಗರದ ಪತ್ರಿಕಾಗೋಷ್ಠಿ ಯಲ್ಲಿ ವಿಷಯ ತಿಳಿಸಿದ ರವರು, ಬೆಳಗಾವಿ ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ವೈ ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿರುವುದು ನಿಜ. ಅವರು ನಮ್ಮ ಸಂಬಂಧಿಯೂ ಹೌದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದನ್ನು ರಾಜಕೀಯ ಪ್ರೇರಿತ ದಾಳಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಭ್ರಷ್ಟಾಚಾರ ಕೇಸ್‌ನಲ್ಲಿ ‘ಇಡಿ’ ದಾಳಿ ಇದೇ ಮೊದಲು: ರಾಜ್ಯ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ ಮಂಜುನಾಥ್ ಅವರ ಮೇಲೆ ಇಷ್ಟು ದೊಡ್ಡ ಮಟ್ಟದಲ್ಲಿ ಇಡಿ ದಾಳಿ ನಡೆಸಿರುವುದು ಇದೇ ಮೊದಲು. ಈ ಬೆಳವಣಿಗೆ ನಮಗೂ ಕೂಡ ಆತಂಕ ಮೂಡಿಸಿದೆ. ಈ ಹಿಂದೆ 2011 ರಲ್ಲಿ ಅವರ ಮೇಲೊಂದು ಪ್ರಕರಣ ದಾಖಲಾಗಿತ್ತು, ಆದರೆ ಅದು ಈಗಾಗಲೇ ರದ್ದಾಗಿದೆ. ಈಗಿನ ದಾಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಏನು ಪ್ರಶ್ನೆ ಕೇಳುತ್ತಾರೆ, ಯಾವ ಮಾಹಿತಿ ಪಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇಂದು ನಾನು ಕೂಡ ಮಂಜುನಾಥ್ ಅವರ ಜೊತೆ ಮಾತನಾಡುತ್ತೇನೆ ಎಂದರು.
ಇಡಿ ದಾಳಿಯ ಹಿಂದಿನ ರಾಜಕೀಯ ಆಯಾಮದ ಬಗ್ಗೆ ಮಾತನಾಡಿದ ಸಚಿವರು, “ನಮ್ಮನ್ನು ರಾಜಕೀಯವಾಗಿ ಕಟ್ಟಿ ಹಾಕಲು ಈ ದಾಳಿ ನಡೆಸಲಾಗುತ್ತಿದೆಯೇ ಎಂಬುದು ಈಗಲೇ ಗೊತ್ತಾಗುವುದಿಲ್ಲ. ಅದಕ್ಕೆ ಕನಿಷ್ಠ ಆರು ತಿಂಗಳು ಬೇಕಾಗುತ್ತದೆ. ಸದ್ಯಕ್ಕೆ ಏನೂ ಹೇಳಲಾಗದು. ಸಾಮಾನ್ಯವಾಗಿ 2028ರ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂತಹ ಇಡಿ ದಾಳಿಗಳು ಆರಂಭವಾಗುವುದು ಸಹಜ” ಎಂದರು.
ಮಂಜುನಾಥ್ ಅವರ ಕುಟುಂಬಸ್ಥರು ಕಳೆದ 30 ವರ್ಷಗಳಿಂದ ಮದ್ಯದ ಅಂಗಡಿ ವ್ಯವಹಾರದಲ್ಲಿದ್ದಾರೆ. ಈ ಭ್ರಷ್ಟಾಚಾರದ ತನಿಖೆ ಕೇವಲ ಒಂದು ಇಲಾಖೆಗೆ ಮಾತ್ರ ಸೀಮಿತವಾಗಿಲ್ಲ, ಈ ಪ್ರಕರಣ ಇಷ್ಟಕ್ಕೇ ಮುಗಿಯುವುದೂ ಇಲ್ಲ. ಆದರೆ, ಮಂಜುನಾಥ್ ಅವರು ಬೆಳಗಾವಿ ಅಷ್ಟೇ ಅಲ್ಲ, ಬೇರೆ ಜಿಲ್ಲೆಯಲ್ಲಿಯೂ ಇದ್ದರೂ, ಎಲ್ಲೇ ಇದ್ದರೂ ಅಧಿಕಾರಿಯಾಗಿಯೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

error: Content is protected !!