21/06/2026
IMG-20260620-WA0005

ಬೆಳಗಾವಿ-20: BSNL ಬೆಳಗಾವಿ 4G ಸ್ಯಾಚುರೇಶನ್ ಯೋಜನೆಯಡಿ ಗ್ರಾಮೀಣ ಹಾಗೂ ದೂರದ ಹಳ್ಳಿಗಳಲ್ಲಿ ಫೈಬರ್ ಟು ದಿ ಹೋಮ್ (FTTH), 4G ಮೊಬೈಲ್ ಸೇವೆಗಳು ಮತ್ತು ವಿವಿಧ ಎಂಟರ್ಪ್ರೈಸ್ ಸೇವೆಗಳನ್ನು ಒದಗಿಸುತ್ತಿದೆ ಎಂದು ಭಾರತೀಯ ದೂರ ಸಂಚಾರ ನಿಗಮ ಮಹಾಪ್ರಬಂಧಕ ವಿಕಾಸ ಜಯಕರ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ, ಉಪ ಮಹಾಪ್ರಬಂಧಕ ಜಿ. ದೇವೆಂದ್ರ ಮಾತನಾಡಿದ ಅವರು, ಭಾರತೀಯ ಸಂಚಾರ ನಿಗಮಲಿಮಿಟೆಡ್ ಈಗ ಸಾಕಷ್ಟು ಸುಧಾರಣೆ ಆಗಿದ್ದು, ಜನರಿಗೆ ಉತ್ತಮ ದೂರ ಸಂಪರ್ಕ ಸೇವೆ ಒದಗಿಸುತ್ತಿದೆ ಎಂದು ತಿಳಿಸಿದರು. ಪ್ರಸ್ತುತ ಜಿಲ್ಲೆಯಾದ್ಯಂತ 11,600ಕ್ಕೂ ಹೆಚ್ಚು FTTH ಗ್ರಾಹಕರು, 2 ಲಕ್ಷಕ್ಕೂ ಅಧಿಕ ಮೊಬೈಲ್ ಬಳಕೆದಾರರು ಹಾಗೂ 1,150ಕ್ಕೂ ಹೆಚ್ಚು ಸಂಸ್ಥೆಗಳು BSNL ಸೇವೆಗಳ ಪ್ರಯೋಜನ ಪಡೆಯುತ್ತಿವೆ.
64 ಫ್ರಾಂಚೈಸಿಗಳ ಮೂಲಕ FTTH ಸೇವೆಗಳನ್ನು ವಿಸ್ತರಿಸಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕೈಗೆಟುಕುವ ದರದಲ್ಲಿ ಸಂಪರ್ಕ ಕಲ್ಪಿಸಲಾಗುತ್ತಿದೆ. ಹೊಸ ಗ್ರಾಹಕರಿಗೆ ಉಚಿತ ಮೋಡಂ, OTT ಸೌಲಭ್ಯಗಳು ಹಾಗೂ ವಿಶೇಷ ಭಾರತ್ನೆಟ್ ಯೋಜನೆಗಳನ್ನೂ ಪರಿಚಯಿಸಲಾಗಿದೆ.
ಮೊಬೈಲ್ ಸೇವೆಗಳ ಭಾಗವಾಗಿ 288 ಟವರ್ಗಳ ಮೂಲಕ 4G ಸೇವೆ ನೀಡಲಾಗುತ್ತಿದ್ದು, ದೂರದ ಮತ್ತು ಅರಣ್ಯ ಪ್ರದೇಶಗಳಲ್ಲಿಯೂ ಸಂಪರ್ಕ ವಿಸ್ತರಿಸಲಾಗಿದೆ. ಖಾಸಗಿ ಜಾಲಗಳು ಇಲ್ಲದ ಪ್ರದೇಶಗಳಲ್ಲೂ BSNL ಸೇವೆ ಲಭ್ಯವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು 4G ಹಾಗೂ 5G ಸೇವೆಗಳ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಗ್ರಾಹಕರು 1800-4444 ಸಂಖ್ಯೆಗೆ ಕರೆ ಅಥವಾ ವಾಟ್ಸಾಪ್ ಮೂಲಕ ದೂರು ದಾಖಲಿಸಿ ಸೇವೆ ಪಡೆಯಬಹುದು ಎಂದು BSNL ಅಧಿಕಾರಿಗಳು ತಿಳಿಸಿದ್ದಾರೆ.
ಇತರ ಖಾಸಗಿ ದೂರಸಂಪರ್ಕ ಮೋಬೈಲ್ ಸೇವೆಗಳಿಗಿಂತ ಈಗ ಬಿಎಸ್ ಎನ್ ಎಲ್ ಯಾವುದಕ್ಕೂ ಕಮ್ಮಿಯಿಲ್ಲ. ನೆಟವರ್ಕ್ ಮತ್ತು ಅಂತರ್ಜಾಲ ಸೇವೆ ಸುಧಾರಣೆ ಆಗಿದೆ. ಸಾರ್ವಜನಿಕ ಗ್ರಾಹಕರು ಕಡಿಮೆ ಬೆಲೆಯಲ್ಲಿ ಹೆಚ್ಚು ಉತ್ಕೃಷ್ಟ ಆಗಿರುವ ಬಿಎಸ್ಎನ್ ಎಲ್ ಸೇವೆ ಪಡೆಯಬೇಕು ಎಂದು ಮನವಿ ಮಾಡಿದರು.
ಈ ವೇಳೆ ಉಪ ಮಹಾಪ್ರಬಂಧಕ ಜಿ. ದೇವೆಂದ್ರ ಸೇರಿ ದೂರಸಂಚಾರ ನಿಗಮದ ಹಿರಿಯ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!