06/05/2026

ಬೆಳಗಾವಿ-06 : ನಗರದ ಅಮನ್ ನಗರದಲ್ಲಿ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮೂವರು ಯುವಕರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಭೀಕರ ಘಟನೆ ಮಂಗಳವಾರ ರಾತ್ರಿವೇಳೆ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರು ಸುದ್ಧಿ ಗೋಷ್ಠಿ ಯಲ್ಲಿ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ ಕುರಿತು ಮಾಹಿತಿ ನೀಡಿದ ಅವರು, ಆರೋಪಿಗಳನ್ನು ಕೇವಲ ಒಂದು ಗಂಟೆಯ ಅವಧಿಯಲ್ಲಿ ಆರು ಜನರನ್ನು ಬಂಧಿಸುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆಂದು ನಗರದ ಪೊಲೀಸ್ ಆಯುಕ್ತರಾದ ಭೊಷನ್ ಬೋರಸೆ ತಿಳಿಸಿದರು. ‌

ಮೇ 5. ರಂದು ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲ ವ್ಯಕ್ತಗಳ ನಡುವೆ ಹಳೆಯ ವೈಷಮ್ಯ ಇದ್ದ ಕಾರಣ ಮಾತಿಗೆ ಮಾತುಗಳು ಬೆಳೆದ ಸಂದರ್ಭದಲ್ಲಿ ತಲ್ವಾರ್ ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಆರೋಪಿಗಳು ಘಟನಾ ಸ್ಥಳದಿಂಸ ಪರಾರಿ ಯಾಗಿದ್ದರು, ಪರಾರಿಯಾದವರನ್ನು ಪತ್ತೆ ಹಚ್ಚಿ ಆರು ಜನರನ್ನು ಬಂಧಿಸಿ ವಿಚಾರಣೆ, ಮುಂದು ವರೆಸಿದ್ದೇವೆ ಎಂದು ಪೊಲೀಸ್ ಆಯುಕ್ತ ಭೂಷಣ ಬೋರಸೆ ತಿಳಿಸಿದರು.
ಆರೋಪಿಗಳಾದ ಹುಸೇನ್, ಜಾವೀದ್ ಸೇರಿದಂತೆ ಎಂಟು ಜನರ ತಂಡವು ಮಜೀದ್ ಶೇಖ್ ಹಾಗೂ ಇತರರ ಮೇಲೆ ತಲ್ಯಾರ್‌ನಿಂದ ಹಲ್ಲೆ ನಡೆಸಿತ್ತು. ಘಟನೆಯಲ್ಲಿ ಅಮನ್ ನಗರದ ವಲಿ ಶೇಖ್, ಇಮಾಮ್ ಶೇಖ್ ಮತ್ತು ಮಜೀದ್ ಶೇಖ್ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಕರಣ ದಾಖಲಾದ ಒಂದು ಗಂಟೆಯಲ್ಲೇ ಮಾಳಮಾರುತಿ ಪಿಐ ನೇತೃತ್ವದ ತಂಡ ಆರು ಆರೋಪಿಗಳನ್ನು ಸೆರೆಹಿಡಿದಿದೆ. ಈ ಗಲಾಟೆಗೆ ಸಂಬಂಧಿಸಿದಂತೆ ದೂರು ಮತ್ತು ಪ್ರತಿದೂರುಗಳು ದಾಖಲಾಗಿದ್ದು, ಕೊಲೆಯತ್ನ ಹಾಗೂ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಕೇಸ್ ಹಾಕಲಾಗಿದೆ. ಜಗಳದಲ್ಲಿ ತಲ್ವಾರ್ ಬಳಸಿದವರ ವಿರುದ್ಧ ರೌಡಿ ಶೀಟ್ ತೆರೆಯುವುದಾಗಿ ಕಮೀಷನರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!