
ಬೆಳಗಾವಿ : ಮೇ 17 ರಂದು 25 ಸಾವಿರ ಕಾರ್ಯಕರ್ತರೊಂದಿಗೆ ಸ್ವಚ್ಛ ಬೆಳಗಾವಿ ಅಭಿಯಾನವನ್ನು ನಡೆಸಲಾಗುವುದು ಎಂದು ಶಿವಂ ಅಸೋಸಿಯೇಷನ್ ನ ಶಿವಾನಂದ ನೀಲಣ್ಣವರ ಹೇಳಿದರು.
ಸೋಮವಾರ ಬೆಳಗಾವಿ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 17 ರಂದು ಸ್ವಚ್ಛ ಬೆಳಗಾವಿ ಅಭಿಯಾನ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇವೆ ಈ ಸ್ವಚ್ಛ ಬೆಳಗಾವಿ ಅಭಿಯಾನದ ಕಾರ್ಯದಲ್ಲಿ ಸುಮಾರು 25 ಸಾವಿರ ಜನರು ಭಾಗಿಯಾಗಿ ಬೆಳಗಾವಿಯನ್ನು ಸಂಪೂರ್ಣವಾಗಿ ಸ್ವಚ್ಛತೆಯ ಕಾರ್ಯ ಮಾಡಲಿದ್ದಾರೆ. ಬೆಳಿಗ್ಗೆ 8 ರಿಂದ ಸ್ವಚ್ಛತಾ ಅಭಿಯಾನ ಪ್ರಾರಂಭವಾಗಿ ಮಧ್ಯಾಹ್ನ 12 ಗಂಟೆಯ ವರಗೆ ನಡೆಯಲಿದೆ ಎಂದು ಹೇಳಿದರು.
ಮಧ್ಯಾಹ್ನದ ನಂತರ 25 ಸಾವಿರ ಕಾರ್ಯಕರ್ತರಿಗೆ ಭೋಜನದ ವ್ಯವಸ್ಥೆ ಏರ್ಪಡಿಸಲಾಗಿದೆ. ರಾತ್ರಿ ನಗರದ ಸರ್ದಾರ್ ಮೈದಾನದಲ್ಲಿ ಮನೋರಂಜನ ಕಾರ್ಯಕ್ರಮದ ಜೊತೆಗೆ ಭೋಜನದ ಕೂಟವನ್ನು ಏರ್ಪಡಿಸಲಾಗಿದೆ. ಬೆಳಗಾವಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ನಗರದ ಸೇರಿದಂತೆ ಜಿಲ್ಲೆಯಿಂದ ಜನತೆಯು ಭಾಗಿ ಯಾಗಲಿದ್ದಾರೆ. ಶಿವಂ ಅಸೋಸಿಯೇಷನ್ ನ ಸಂಸ್ಥಾಪಕ ಶಿವಾನಂದ ನೀಲಣ್ಣವರ ತಿಳಿಸಿದರು.
ಈ ವೇಳೆ ಮಂಜುನಾಥ್ ಗಡ್ಡನವರ್, ಶಿವಾನಂದ್ ನೀಲಣ್ಣವರ, ಸೇರಿದಂತೆ ಇತರರು ಉಪಸ್ಥಿತರಿದ್ದರು.
